ಅಪ್ಪನ ಬೈಕನ್ನೇರಿ ಸವಾರಿ ಹೊರಟ ಬಾಲಕಿಯಿಂದ ಚಾಲಾಕಿ ಕಳ್ಳನ ರಹಸ್ಯ ಬಯಲು!
ಅಪ್ರಾಪ್ತ ಬಾಲಕಿಯೊಬ್ಬಳು ತನ್ನ ತಂದೆಯ ಬೈಕ್ ಏರಿ ರೈಡ್ ಮಾಡುತ್ತಿದ್ದಾಗಲೇ ಆ ಬೈಕ್ ಕಳವು ಮಾಡಿದ ಬೈಕನ್ನು ಆಕೆಯ ತಂದೆ ಕಳವು ಮಾಡಿ ಇರಿಸಿಕೊಂಡಿದ್ದನೆಂದು ತಿಳಿದು....
ಚೆನ್ನೈ: ಅಪ್ರಾಪ್ತ ಬಾಲಕಿಯೊಬ್ಬಳು ತನ್ನ ತಂದೆಯ ಬೈಕ್ ಏರಿ ರೈಡ್ ಮಾಡುತ್ತಿದ್ದಾಗಲೇ ಆ ಬೈಕನ್ನು ಆಕೆಯ ತಂದೆಯೇ ಕಳವು ಮಾಡಿ ಇರಿಸಿಕೊಂಡಿದ್ದನೆಂದು ತಿಳಿದು ಬಂದದ್ದಲ್ಲದೆ ಆರೋಪಿ ತಂದೆಯನ್ನೂ ಬಂಧಿಸಿದ ಘಟನೆ ಚೆನ್ನೈನಲ್ಲಿ ನಡೆದಿದೆ.
14 ವರ್ಷದ ಅಪ್ರಾಪ್ತ ಬಾಲಕಿ ತನ್ನ ತಂದೆ ಬೈಕನ್ನೇರಿ ಸವಾರಿ ಹೊರಟಾಗ ಈ ವಿಷಯ ಬೆಳಕಿಗೆ ಬಂದಿದೆ. ಮತ್ತು ಆ ಬೈಕ್ ಕಳವು ಮಾಡಿರುವ ಬೈಕೆ ನ್ನುವುದನ್ನು ಗುರುತಿಸಿದ್ದಾರೆ. ಬಳಿಕ ಆರೋಪಿಯನ್ನು ಬಂಧಿಸುವಲ್ಲಿ ಸಹ ಯಶಸ್ವಿಯಾಗಿದಾರೆ. ಆದರೆ ಮುಗ್ದ ಬಾಲಕಿಗೆ ಮಾತ್ರ ತನ್ನ ತಂದೆಯೇ ಕಳ್ಳನೆನ್ನುವುದು ಈ ಮೊದಲು ಎಂದಿಗೂ ತಿಳಿದಿರಲಿಲ್ಲ.
ಘಟನೆ ವಿವರ
ಕಾರ್ತಿಕ್ (33) ತಮ್ಮ ಕುಟುಂಬದೊಂದಿಗೆ ಮನಾಲಿಯಲ್ಲಿರುವ ದೇವಾಲಯವೊಂದಕ್ಕೆ ಹೋಗಿದ್ದಾಗ ದೇವಾಲಯದ ಹೊರಗೆ ತನ್ನ ಹೊಂಡಾ ಆಕ್ಟಿವಾ ಬೈಕ್ ಪಾರ್ಕ್ ಮಾಡಿದ್ದರು. ಆದರೆ ದೇವಾಲಯ ದರ್ಶನ ಮುಗಿಸಿ ಹಿಂತಿರುಗಿದಾಗ ಆ ಬೈಕ್ ಕಾಣೆಯಾಗಿದ್ದು ಆ ಸಂಬಂಧ ಕಾರ್ತಿಕ್ ಪೋಲೀಸರಿಗೆ ದೂರು ಸಲ್ಲಿಸಿದ್ದರು.
ಅಂದು ಶಿವರಾತ್ರಿಯಾಗಿದ್ದು ರಾತ್ರಿ ಹನ್ನೊಂದರ ಸುಮಾರಿಗೆ ಕಾರ್ತಿಕ್ ಕುಟುಂಬ ದೇವಾಲಯಕ್ಕೆ ಆಗಮಿಸಿದಾಗ ಈ ಘಟನೆ ನಡೆದಿದೆ. ಒಂದು ಗಂಟೆ ಕಾಲ ಬೈಕ್ ಶೋಧನೆ ನಡೆಸಿದ್ದ ಕಾರ್ತಿಕ್ ಗೆ ನಿರಾಶೆಯಾಗಿದೆ. ಬಳಿಕ ಆತ ತನ್ನ ಪತ್ನಿ, ಮಕ್ಕಳನ್ನು ಆಟೋರಿಕ್ಷಾದಲ್ಲಿ ಮನೆಗೆ ತಲುಪಿಸಿ ತಾನು ಪೋಲೀಸರಿಗೆ ದೂರು ಕೊಡಲು ತೆರಳುವಾಗಲೇ. ಮಧ್ಯರಾತ್ರಿ 1ಗಂಟೆ ವೇಳೆಗೆ ಓರ್ವ ಬಾಲಕಿ ತನ್ನ ಬೈಕ್ ಏರಿ ಬರುತ್ತಿರುವುದು ಕಂಡಿದೆ. ತಕ್ಷಣ ಆಟೋ ಚಾಲಕನಿಗೆ ಆಬೈಕ್ ಹಿಂಬಾಲಿಸಲು ಹೇಳಿದ್ದಾರೆ.
ಬಾಲಕಿಯನ್ನು ಅಡ್ಡಗಟ್ಟಿ ಪ್ರಶ್ನಿಸಲು ಆಕೆ ಇದು ತನ್ನ ತಂದೆಯ ಬೈಕ್ ಎಂದು ಹೇಳಿದ್ದಾಳೆ. ಅಲ್ಲದೆ ಆಕೆಯ ತಂದೆ ಆಟೋ ಚಾಲಕನಾಗಿದ್ದು ಅವನು ಇದೇ ಸೋಮವಾರ ಈ ಹೊಂಡಾ ಬೈಕ್ ಮನೆಗೆ ತಂದಿದ್ದಾಗಿಯೂ ಹೇಳಿದಳು. ಕಾರ್ತಿಕ್ ತಡ ಮಾಡದೆ ಈ ವಿಷಯವನ್ನು ಪೋಲೀಸರಿಗೆ ತಿಳಿಸಿದ್ದಾರೆ.
ಪೋಲೀಸರು ಭಾಲಕಿಯ ಸಹಾಯದೊಡನೆ ಆಕೆಯ ತಂದೆ ವಿ. ಸರವಣನ್ ಎಂಬುವವನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಲ್ಲದೆ ಆರೋಪಿಯಿಂದ ನಾಲ್ಕು ದ್ವಿಚಕ್ರ ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.