ನೀರವ್ ಮೋದಿ ಜೊತೆಗೆ ಕಾಂಗ್ರೆಸ್ ನ ನಂಟು ಹಳೆಯದು: ಬಿಜೆಪಿ 
ದೇಶ

ನೀರವ್ ಮೋದಿ ಜೊತೆಗೆ ಕಾಂಗ್ರೆಸ್ ನ ನಂಟು ಹಳೆಯದು: ಬಿಜೆಪಿ

ವಂಚನೆ ಪ್ರಕರಣ ಎದುರಿಸುತ್ತಿರುವ ಉದ್ಯಮಿ ನೀರವ್ ಮೋದಿ ಜೊತೆಗೆ ಕಾಂಗ್ರೆಸ್ ಹಳೆಯ ಹಾಗೂ ಬಲಿಷ್ಠ ನಂಟು ಹೊಂದಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಆರೋಪಿಸಿದ್ದಾರೆ.

ಜೈಪುರ: ವಂಚನೆ ಪ್ರಕರಣ ಎದುರಿಸುತ್ತಿರುವ ಉದ್ಯಮಿ ನೀರವ್ ಮೋದಿ ಜೊತೆಗೆ ಕಾಂಗ್ರೆಸ್ ಹಳೆಯ ಹಾಗೂ ಬಲಿಷ್ಠ ನಂಟು ಹೊಂದಿದೆ ಎಂದು ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್ ಆರೋಪಿಸಿದ್ದಾರೆ. 
ನೀರವ್ ಮೋದಿ ಲಂಡನ್ ನಲ್ಲಿರುವುದು ಖಾತ್ರಿಯಾಗಿರುವ ವರದಿಯ ಬಗ್ಗೆ ಮಾತನಾಡಿರುವ ಅವರು, ಲಂಡನ್ ನಲ್ಲಿ ನೀರವ್ ಮೋದಿ ಇರುವುದನ್ನು ಕಂಡು ಕಾಂಗ್ರೆಸ್ ಕಾರ್ಯಕರ್ತರಿಗೆ ಸಂತಸವಾಗಿರಬೇಕ, ತಮ್ಮದೇ ಪಕ್ಷ ಆಶ್ರಯ ನೀಡಿದ್ದ, ಮೆರೆಸಿದ್ದ ಉದ್ಯಮಿ ಈಗ ಲಂಡನ್ ನಲ್ಲಿರುವುದಕ್ಕೆ ಕಾಂಗ್ರೆಸ್ ನವರಿಗೆ ಸಂತೋಷವಾಗಿರುತ್ತದೆ ಎಂದು ಜಾವ್ಡೇಕರ್ ಹೇಳಿದ್ದಾರೆ.
ಕಾಂಗ್ರೆಸ್ ಸರ್ಕಾರ ಇರುವಾಗ ಕಳ್ಳರು ದೇಶದಲ್ಲೇ ಇರಲು ಬಯಸುತ್ತಿದ್ದರು. ಕಾಂಗ್ರೆಸ್ ಸರ್ಕಾರದಲ್ಲಿ ಆರಾಮಾಗಿ ಲೂಟಿ ಹೊಡೆಯಲಾಗುತ್ತಿತ್ತು ಸರ್ಕಾರವೇ ಅದಕ್ಕೆ ನೆರವು ನೀಡುತ್ತಿತ್ತು ಎಂದು ಜಾವ್ಡೇಕರ್ ಆರೋಪಿಸಿದ್ದಾರೆ. 
ಆದರೆ ಮೋದಿ ಸರ್ಕಾರ ಬಂದ ನಂತರ ಅವೆಲ್ಲಕ್ಕೂ ಕಡಿವಾಣ ಹಾಕಲಾಯಿತು, ಲೂಟಿ ಮಾಡುತ್ತಿದ್ದ ಉದ್ಯಮಿಗಳಿಗೆ ಭಯ ಪ್ರಾರಂಭವಾಯಿತು. ಈಗ ಕಳ್ಳರೇ ಕಾವಲುಗಾರನನ್ನು ನಿಂದಿಸುತ್ತಿದ್ದಾರೆ ಎಂದು ಜಾವ್ಡೇಕರ್ ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧವೇ ಸ್ಟಿಂಗ್ ಆಪರೇಷನ್ ಮಾಡಿ ಟ್ರ್ಯಾಪ್​ ಮಾಡಲು ಯತ್ನ': ಡಿ ಕೆ ಶಿವಕುಮಾರ್ ಸ್ಫೋಟಕ ಆರೋಪ; Video

ಶಾಸಕರ ಲೆಟರ್‌ಹೆಡ್'ನಲ್ಲೇ 'ಸತ್ತಿದ್ದಾರೆ' ಎಂದು ಅರ್ಜಿ: ಯತ್ನಾಳ್ ಸೇರಿ ಮೂವರ ವಿರುದ್ಧ FIR ದಾಖಲು

'Evil Dead': ನಟ ನಾನಾ ಪಾಟೇಕರ್ ಸಾವು, #MeToo ಆರೋಪ ಮಾಡಿದ್ದ ನಟಿ ತನುಶ್ರೀ ದತ್ತಾ ಹೇಳಿದ್ದೇನು? ವಿಚಿತ್ರ ಪೋಸ್ಟ್!

ಇದ್ದಕ್ಕಿದ್ದಂತೆ ಬಾಯ್ತೆರೆದ ರಸ್ತೆ, ಕಾರು ಆಪೋಷನ, ಕೂದಲೆಳೆ ಅಂತರದಲ್ಲಿ ಚಾಲಕ ಬಚಾವ್-Video

'SIR' ವಿರುದ್ಧ ಭಾರೀ ಪ್ರತಿಭಟನೆ: ಜ್ಞಾನೇಶ್ ಕುಮಾರ್ Z+ ಭದ್ರತೆ ಮತ್ತಷ್ಟು ಹೆಚ್ಚಿಸಿದ ಕೇಂದ್ರ ಸರ್ಕಾರ!