ದೇಶ

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಕನಿಷ್ಠ ಆದಾಯ ಖಾತ್ರಿ ಯೋಜನೆ ಜಾರಿ; ರಾಹುಲ್ ಗಾಂಧಿ

Sumana Upadhyaya
ಹೈದರಾಬಾದ್: ಲೋಕಸಭಾ ಚುನಾವಣೆಗೆ ತೆಲಂಗಾಣದಿಂದ ಚುನಾವಣಾ ಪ್ರಚಾರ ರ್ಯಾಲಿ ಆರಂಭಿಸಿದ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಬಡವರಿಗೆ ಕನಿಷ್ಠ ಆದಾಯ ಖಾತ್ರಿ ಯೋಜನೆಯನ್ನು ಜಾರಿಗೆ ತರುವುದಾಗಿ ಹೇಳಿದ್ದಾರೆ.
ಹೈದರಾಬಾದ್ ಹೊರವಲಯದ ಶಾಮ್ ಶಬಾದ್ ನಲ್ಲಿ ಕಾಂಗ್ರೆಸ್ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿ, ಪ್ರಧಾನಿ ನರೇಂದ್ರ ಮೋದಿಯವರು ಭಾರತವನ್ನು ಎರಡು ರೀತಿಯಲ್ಲಿ ಮಾಡಲು ಹೊರಟಿದ್ದಾರೆ, ಒಂದು ಕೇವಲ ಶ್ರೀಮಂತರಿಗೆ ಮತ್ತು ಸಾಲಮನ್ನಾಕ್ಕೆ ಕೈ ಮುಗಿದು ಬೇಡಿಕೊಳ್ಳು ರೈತರಿಗೆ ನಿರಾಸೆಯನ್ನುಂಟುಮಾಡುವುದು. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಈ ಪರಿಸ್ಥಿತಿ ಉಂಟಾಗುವುದಿಲ್ಲ ಎಂದರು.
ದೇಶದ ಪ್ರತಿಯೊಬ್ಬ ಬಡವರಿಗೆ ಸಹ ಕನಿಷ್ಠ ಆದಾಯ ಖಾತ್ರಿ ಯೋಜನೆಯನ್ನು ಕಾಂಗ್ರೆಸ್ ಜಾರಿಗೆ ತರಲಿದೆ. 2019ರ ಚುನಾವಣೆ ನಂತರ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಭಾರತ ಸರ್ಕಾರ ಕನಿಷ್ಠ ಆದಾಯವನ್ನು ನಿಗದಿಪಡಿಸಲಿದೆ ಎಂದರು.
ಕನಿಷ್ಠ ಆದಾಯಕ್ಕಿಂತ ಕಡಿಮೆ ಆದಾಯವನ್ನು ಜನರು ಹೊಂದಿದ್ದರೆ ಜನರಿಗೆ ಹಣ ದೊರಕುತ್ತದೆ. ಅದು ಯಾವ ರಾಜ್ಯದ ಯಾವ ಜನರೇ ಆಗಿರಲಿ, ಯಾವ ಮತ, ಧರ್ಮ, ಭಾಷೆ ಮಾತನಾಡುವವರೆಂದು ನೋಡದೆ ಕಾಂಗ್ರೆಸ್ ನೇತೃತ್ವದ ಸರ್ಕಾರ ಕನಿಷ್ಠ ಆದಾಯ ಭದ್ರತೆಯನ್ನು ನಿಗದಿಪಡಿಸಲಿದೆ ಎಂದರು.
SCROLL FOR NEXT