ಸಾಂದರ್ಭಿಕ ಚಿತ್ರ 
ದೇಶ

ಮದುವೆ ಮಂಟಪಕ್ಕೆ ಪಾನಮತ್ತನಾಗಿ ಬಂದ ವರ: ವಿವಾಹ ರದ್ದುಗೊಳಿಸಿದ ವಧು

ಮದುವೆ ಮಂಟಪಕ್ಕೆ ವರ ಬರುತ್ತಿದ್ದಂತೆಯೇ ವಧು ತನ್ನ ವಿವಾಹವನ್ನೇ ರದ್ದುಗೊಳಿಸಿದ ಘಟನೆ ಬಿಹಾರದ ಚಾಪ್ರದಲ್ಲಿ ನಡೆದಿದೆ...

ಬಿಹಾರ: ಮದುವೆ ಮಂಟಪಕ್ಕೆ ವರ ಬರುತ್ತಿದ್ದಂತೆಯೇ ವಧು ತನ್ನ ವಿವಾಹವನ್ನೇ ರದ್ದುಗೊಳಿಸಿದ ಘಟನೆ ಬಿಹಾರದ ಚಾಪ್ರದಲ್ಲಿ ನಡೆದಿದೆ.
ರಿಂಕಿ ಕುಮಾರಿ ಮದುವೆಯನ್ನು ಕ್ಯಾನ್ಸಲ್ ಮಾಡಿದ ವಧು. ರಿಂಕಿ ಮದುವೆ ಬಬ್ಲು ಕುಮಾರ್ ಜೊತೆ ನಿಶ್ಚಯವಾಗಿತ್ತು. ಇಬ್ಬರ ಮದುವೆ ನಡೆಯಲು ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಆದರೆ ಕೊನೆಯ ಕ್ಷಣದಲ್ಲಿ ವಧು ಮದುವೆಯನ್ನೇ ರದ್ದುಗೊಳಿಸಿದ್ದಾಳೆ.
ವಧು-ವರರಿಗಾಗಿ ಮದುವೆ ಮಂಟಪದಲ್ಲಿ ಕಾಯುತ್ತಿದ್ದ ವೇಳೆ ಬಬ್ಲು ಕುಡಿದ ಮತ್ತಿನಲ್ಲಿ ಮದುವೆ ಮನೆಗೆ ಆಗಮಿಸಿದ್ದಾನೆ. ಅಲ್ಲದೆ ಅಲ್ಲಿ ನೆರೆದಿದ್ದ ಸಂಬಂಧಿಕರ ಜೊತೆ ಅಸಭ್ಯವಾಗಿ ನಡೆದುಕೊಂಡಿದ್ದಾನೆ. ಇದನ್ನು ನೋಡಿದ ರಿಂಕಿ ವರ ಬಬ್ಲುನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ .
ಬಳಿಕ ಇಬ್ಬರ ಕುಟುಂಬದವರು ರಿಂಕಿಗೆ ಈ ಮದುವೆಗೆ ಒಪ್ಪಿಸಲು ಪ್ರಯತ್ನಿಸಿದ್ದಾರೆ. ಆದರೆ ರಿಂಕಿ, ಬಬ್ಲುನನ್ನು ಮದುವೆಯಾಗಲು ನಿರಾಕರಿಸಿದ್ದಾಳೆ. ರಿಂಕಿ ಮದುವೆಗೆ ನಿರಕಾರಿಸುತ್ತಿದ್ದಂತೆ ವಧುವಿನ ಕುಟುಂಬದವರು ವರದಕ್ಷಿಣೆಗೆ ನೀಡಿದ ಹಣವನ್ನು ಹಿಂತಿರುಗಿಸಲು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ನೇಪಾಳ ಭೀಕರ ಪ್ರವಾಹ: 95 ಮಂದಿ ಸಾವು; 105 ಭಾರತೀಯರು ಸೇರಿ 400 ಮಂದಿ ನಾಪತ್ತೆ: ಬಿಹಾರ, ಯುಪಿಯಲ್ಲಿ ಹೈ ಅಲರ್ಟ್! Video

Nepal Floods: ನೇಪಾಳದ ವಿನಾಶಕಾರಿ ಪ್ರವಾಹಕ್ಕೆ ಇದೇನಾ ಕಾರಣ? ಉಪಗ್ರಹ ಚಿತ್ರಗಳಲ್ಲಿ ಸ್ಫೋಟಕ ಸುಳಿವು!

'Chhatron Ki Goonj' ಕಾರ್ಯಕ್ರಮದ ವೇಳೆ Rahul Gandhi ಮಾಡಿದ 29 ತಪ್ಪುಗಳ ದಾಖಲೆ ನೀಡಿದ ಜೂಟ್ ಕಿ ಗೂಂಜ್ ವೆಬ್​ಸೈಟ್!

ಆರ್ ಎಸ್ ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕಾರ್ಯಕ್ರಮಕ್ಕೆ ವಿರೋಧ: ಮೇಯರ್ ಮಮ್ದಾನಿ ವಿರುದ್ಧ ಅಮೆರಿಕದ ಖ್ಯಾತ ಗಾಯಕಿ ಕಿಡಿ!

ನೇಪಾಳದಲ್ಲಿ ಭೀಕರ ಪ್ರವಾಹ: ಬಿಹಾರ, ಉತ್ತರ ಪ್ರದೇಶದಲ್ಲಿ NDRF ಹೈ ಅಲರ್ಟ್; ನದಿ ಪಾತ್ರದಲ್ಲಿ ಕಟ್ಟೆಚ್ಚರ