ಸಾಂದರ್ಭಿಕ ಚಿತ್ರಗಳು 
ದೇಶ

ಇಥಿಯೋಪಿಯಾ ವಿಮಾನ ಪತನ: ಬೋಯಿಂಗ್ ವಿಮಾನಗಳ ಸುರಕ್ಷತೆಗೆ ಡಿಜಿಸಿಎ ನಿರ್ದೇಶನಗಳು

ಇಥಿಯೋಪಿಯಾ ವಿಮಾನ ಪತನ ಹಿನ್ನೆಲೆಯಲ್ಲಿ ಬೋಯಿಂಗ್ 737 ಮ್ಯಾಕ್ಸ್ ವಿಮಾನಗಳನ್ನು ಬಳಸುತ್ತಿರುವ ದೇಶದ ವಿಮಾನಯಾನ ಸಂಸ್ಥೆಗಳಾದ ಜೆಟ್ ಏರ್ ವೇಸ್ ಹಾಗೂ ಸ್ಪೈಸ್ ಜೆಟ್ ಸಂಸ್ಥೆಗಳಿಗೆ ಹೆಚ್ಚುವರಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ನಾಗರಿಕ ವಿಮಾನಯಾನ ನಿರ್ದೇಶನಾಲಯ ಸಲಹೆ ನೀಡಿದೆ.

ನವದೆಹಲಿ: ಇಥಿಯೋಪಿಯಾ ವಿಮಾನ ಪತನ ಹಿನ್ನೆಲೆಯಲ್ಲಿ ಬೋಯಿಂಗ್ 737  ಮ್ಯಾಕ್ಸ್  ವಿಮಾನಗಳನ್ನು ಬಳಸುತ್ತಿರುವ  ದೇಶದ ವಿಮಾನಯಾನ ಸಂಸ್ಥೆಗಳಾದ ಜೆಟ್ ಏರ್ ವೇಸ್ ಹಾಗೂ ಸ್ಪೈಸ್  ಜೆಟ್  ಸಂಸ್ಥೆಗಳಿಗೆ ಹೆಚ್ಚುವರಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ  ನಾಗರಿಕ ವಿಮಾನಯಾನ  ನಿರ್ದೇಶನಾಲಯ ಸಲಹೆ ನೀಡಿದೆ.

ಈ ವಿಮಾನಗಳನ್ನು ಚಲಾಯಿಸುವ ಪೈಲಟ್  ಕನಿಷ್ಠ 1 ಸಾವಿರ ಗಂಟೆಗಳ ಕಾಲ ವಿಮಾನ ಹಾರಾಟದ ಅನುಭವ ಹೊಂದಿರಬೇಕು ಎಂಬುದನ್ನು ಡಿಜಿಸಿಎ ನಿರ್ದೇಶಿಸಿದೆ.

ಇಥಿಯೋಪಿಯಾದಲ್ಲಿ ಬೋಯಿಂಗ್ 737  ಮ್ಯಾಕ್ಸ್ ವಿಮಾನ ಪತನಗೊಂಡು 157 ಜನರು ಮೃತಪಟ್ಟ ಪರಿಣಾಮ ಹಲವು ರಾಷ್ಟ್ರಗಳು ಬೋಯಿಂಗ್ ವಿಮಾನದ ಸುರಕ್ಷತೆ ಬಗ್ಗೆ ಪ್ರಶ್ನೆ ಮಾಡುತ್ತಿದ್ದು, ಭಾರತದ ನಾಗರಿಕ ವಿಮಾನಯಾನ ನಿರ್ದೇಶನಾಲಯ ಸೂಕ್ತ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ತಿಳಿಸಿದೆ.

ಡಿಜಿಸಿಎ ನಿರಂತರವಾಗಿ ಪರಿಸ್ಥಿತಿಯ ನಿರ್ವಹಣೆ ಮಾಡಲಿದ್ದು, ಅಪಘಾತ ತನಿಖಾ ಏಜೆನ್ಸಿಯಿಂದ ಪಡೆದ ಮಾಹಿತಿ ಆಧಾರದಲ್ಲಿ ಇನ್ನಿತರ ಕಾರ್ಯಾಚರಣೆ, ಮೇಲ್ವಿಚಾರಣೆ ಕ್ರಮ , ನಿರ್ಬಂಧಗೊಳಿಸುವುದನ್ನು ಕೈಗೊಳ್ಳಲಾಗುವುದು ಎಂದು ನಿಯಂತ್ರಕರು ಹೇಳಿಕೆಯಲ್ಲಿ ತಿಳಿಸಿದ್ದಾರೆ.

ಭಾರತದ ನಾಗರಿಕ ವಿಮಾನಯಾನ ನಿರ್ದೇಶನಾಲಯದ ಹೊಸ ನಿರ್ದೇಶನಗಳು ಇಂದಿನಿಂದ ಜಾರಿಗೆ ಬರಲಿದೆ ಎಂಬುದು ತಿಳಿದುಬಂದಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

ಹಾರ್ಮುಜ್ ಜಲಸಂಧಿ ತೆರೆಯಲು ಇರಾನ್‌ನ 7 ದಿನಗಳ ಕದನ ವಿರಾಮ ಪ್ರಸ್ತಾಪ: ಡೊನಾಲ್ಡ್ ಟ್ರಂಪ್ ತಿರಸ್ಕೃತ

Nepal flood: ಇನ್ನೂ ಪತ್ತೆಯಾಗದ ತಮಿಳು ನಾಡಿನ 85 ಯಾತ್ರಿಕರು; ಕುಟುಂಬಸ್ಥರ ಅರಣ್ಯರೋಧನ

ಪ್ರತಿಭಟನೆ ವೇಳೆ ಪ್ರಜ್ಞೆ ಕಳೆದುಕೊಂಡ ಮಹಿಳೆ: ಸಚಿವ ಹೆಚ್.ಸಿ. ಬಾಲಕೃಷ್ಣ ಪೊಲೀಸರನ್ನು ಛೂಬಿಟ್ರಾ? ಜೆಡಿಎಸ್ ಆರೋಪ Video

ನಂದಿನಿ ಹಾಲಿನ ದರ ಪ್ರತಿ ಲೀ.ಗೆ 10ರೂ. ಏರಿಕೆ? ಇಂದು ಸಿಎಂ ಮಹತ್ವದ ಸಭೆ, ಅಂತಿಮ ನಿರ್ಧಾರ ಹೊರಬೀಳುವ ಸಾಧ್ಯತೆ

ಶಿಕ್ಷಕರಿಗೆ SIR ಡ್ಯೂಟಿಯಿಂದ ಪರೀಕ್ಷಾ ಫಲಿತಾಂಶಗಳ ಮೇಲೆ ಪರಿಣಾಮ: ಮಧು ಬಂಗಾರಪ್ಪ ಆತಂಕ