ನವದೆಹಲಿ: ಇಥಿಯೋಪಿಯನ್ ಏರ್ ಲೈನ್ಸ್ ವಿಮಾನ ದುರಂತದಲ್ಲಿ ಮೃತಪಟ್ಟ ಭಾರತೀಯರ ಕುಟುಂಬ ಸದಸ್ಯರಿಗೆ ಅಗತ್ಯ ನೆರವು ನೀಡುವಂತೆ ಅಲ್ಲಿನ ಭಾರತೀಯ ಹೈಕಮೀಷನರ್ ಗೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಸೂಚಿಸಿದ್ದಾರೆ.
ಈ ದುರ್ಘಟನೆ ಬಗ್ಗೆ ಟ್ವೀಟರ್ ನಲ್ಲಿ ಸಂತಾಪ ವ್ಯಕ್ತಪಡಿಸಿರುವ ಸುಷ್ಮಾ ಸ್ವರಾಜ್, ಇಥಿಯೋಪಿಯನ್ ಏರ್ ಲೈನ್ಸ್ ಇಟಿ 302 ವಿಮಾನ ಅಪಘಾತ ದುರದೃಷ್ಟಕರ ಘಟನೆ ಸುದ್ದಿ ಕೇಳಿ ನೋವಾಗಿದೆ. ಈ ದುರ್ಘಟನೆಯಲ್ಲಿ ನಾಲ್ವರು ಭಾರತೀಯರನ್ನು ಕಳೆದುಕೊಂಡಿದ್ದೇವೆ. ಮೃತರ ಕುಟುಂಬ ಸದಸ್ಯರಿಗೆ ಅಗತ್ಯ ನೆರವು ನೀಡುವಂತೆ ಅಲ್ಲಿನ ಹೈಕಮೀಷನರ್ ಗೆ ತಿಳಿಸಲಾಗಿದೆ ಎಂದು ಅವರು ಹೇಳಿದ್ದಾರೆ.