ಜಮ್ಮು- ಕಾಶ್ಮೀರ : ಕಳೆದ ಆರು ತಿಂಗಳ ಹಿಂದೆ ಪಿಡಿಪಿ ಶಾಸಕ ಐಜಾಜ್ ಅಹ್ಮದ್ ಮಿರ್ ನಿವಾಸದಲ್ಲಿ ನಡೆದಿದ್ದ ಏಳು ರೈಫಲ್ಸ್ ಹಾಗೂ ಒಂದು ಪಿಸ್ತೂಲ್ ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳ ಮೂವರು ಆರೋಪಿಗಳನ್ನು ಬಂಧಿಸಿದೆ.
ಪರ್ವೇಜ್ ಎ ವಾನಿ, ಜಾವಿದ್ ವೈ ದಾರ್ ಮತ್ತು ಸುಬ್ಜಾರ್ ಎ ಕುಮಾರ್ ಬಂಧಿತ ಆರೋಪಿಗಳು.
ಈ ಮೂವರು ಆರೋಪಿಗಳು ಕಳೆದ ವರ್ಷ ಸೆಪ್ಟೆಂಬರ್ 28 ರಂದು ಎಸ್ ಪಿಒ ಅದಿಲ್ ಬಷೀರ್ ಷೇಕ್ ಮತ್ತು ಆತನ ಸಹಚರಿಂದ ಮಾಜಿ ಶಾಸಕ ಐಜಾಜ್ ಅಹ್ಮದ್ ಮಿರ್ ಮನೆಯಿಂದ 7 ಎಕೆ ರೈಫಲ್ಸ್ ಹಾಗೂ ಪಿಸ್ತೂಲ್ ಕಳ್ಳತನ ಮಾಡಿದ್ದರು.