ದೇಶ

52,750 ಕೋಟಿ ರೂ. ಬೆಲೆಯ ವಿಪ್ರೊ ಷೇರುಗಳನ್ನು ದಾನವಾಗಿ ನೀಡಿದ ಅಜೀಂ ಪ್ರೇಮ್ ಜಿ

Sumana Upadhyaya

ಮುಂಬೈ: ಸಾಮಾಜಿಕ ಕಾರ್ಯಕ್ಕೆ ವಿಪ್ರೊ ಷೇರಿನಲ್ಲಿ ಸುಮಾರು 52,750 ಕೋಟಿ ರೂಪಾಯಿಗಳನ್ನು ಮೀಸಲಿಡುವುದಾಗಿ ವಿಪ್ರೊ ಸ್ಥಾಪಕ ಅಜೀಂ ಪ್ರೇಮ್ ಜಿ ತಿಳಿಸಿದ್ದಾರೆ.

ಭಾರತದಲ್ಲಿ ಎರಡನೇ ಅತಿದೊಡ್ಡ ಶ್ರೀಮಂತ ಹಾಗೂ ವಿಶ್ವದಲ್ಲಿ 36ನೇ ಅತಿದೊಡ್ಡ ಶ್ರೀಮಂತರಾಗಿರುವ ಅಜೀಂ ಪ್ರೇಮ್ ಜಿ, ವಿಪ್ರೊ ಆಸ್ತಿಯಲ್ಲಿ ಶೇಕಡಾ 34ರಷ್ಟು ಪಾಲನ್ನು ಜನೋಪಕಾರಿ ಕಾರ್ಯಗಳಿಗೆ ಮೀಸಲಿಟ್ಟಿದ್ದಾರೆ.
ಈ ಮೂಲಕ ಅಜೀಂ ಪ್ರೇಮ್ ಜಿ ಫೌಂಡೇಶನ್ ಗೆ ಒಟ್ಟು ದಾನದ ಮೊತ್ತದಲ್ಲಿ ಶೇಕಡಾ 67ರಷ್ಟು ದಾನ ಮಾಡಿದಂತಾಗುತ್ತದೆ. ಭಾರತದಲ್ಲಿ ನ್ಯಾಯಯುತ, ಸಮಾನ, ಮಾನವೀಯ ಮತ್ತು ಸ್ಥಿರ ಅಭಿವೃದ್ಧಿ ಸಮಾಜದ ಬೆಳವಣಿಗೆಗೆ ಪ್ರೇಮ್ ಜಿ ಫೌಂಡೇಶನ್ ಬದ್ಧವಾಗಿದೆ ಎಂದು ಹೇಳಿಕೆ ತಿಳಿಸಿದೆ.
SCROLL FOR NEXT