ದೇಶ

ವಿಶ್ವಸಂಸ್ಥೆ ಸದಸ್ಯ ರಾಷ್ಟ್ರಗಳ ತಪರಾಕಿ ಹೊರತಾಗಿಯೂ ಮಸೂದ್ ಅಜರ್ ನಿಷೇಧಕ್ಕೆ ಅಡ್ಡಗಾಲಿಗೆ ಚೀನಾ ಸಮರ್ಥನೆ

Srinivas Rao BV
ಬೀಜಿಂಗ್: ಪಾಕಿಸ್ತಾನದ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಭಯೋತ್ಪಾದಕ ಮಸೂದ್ ಅಜರ್ ನಿಷೇಧಕ್ಕೆ ಅಡ್ಡಗಾಲು ಹಾಕಿರುವುದನ್ನು ಚೀನಾ ಸಮರ್ಥಿಸಿಕೊಂಡಿದೆ. 
ಮಸೂದ್ ಅಜರ್ ಗೆ ನಿಷೇಧ ವಿಧಿಸುವ ಸಂಬಂಧ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿ ಭಾರತ, ಅಮೆರಿಕ, ಫ್ರಾನ್ಸ್ ಸೇರಿದಂತೆ ಹಲವು ರಾಷ್ಟ್ರಗಳು ನಿರ್ಣಯ ಮಂಡಿಸಿದ್ದವು. ಆದರೆ ಈ ನಿರ್ಣಯಕ್ಕೆ ಚೀನಾ ಅಡ್ಡಗಾಲು ಹಾಕಿತ್ತು. ಚೀನಾ ನಡೆಗೆ ತೀವ್ರ ವಿರೋಧ ವ್ಯಕ್ತಪಡಿಸಿದ್ದ ವಿಶ್ವಸಂಸ್ಥೆ ಭದ್ರತಾ ಮಂಡಳಿಯಲ್ಲಿರುವ ಸದಸ್ಯ ರಾಷ್ಟ್ರಗಳು ನೀವು ಬೆಂಬಲಿಸದಿದ್ದರೆ ಬೇರೆ ಕ್ರಮ ಕೈಗೊಳ್ಳಬೇಕಾಗುವುದು ಅನಿವಾರ್ಯ ಎಂದು ಚೀನಾಗೆ ಎಚ್ಚರಿಕೆ ನೀಡಿದ್ದವು. ಇದೆಲ್ಲದರ ಹೊರತಾಗಿಯೂ ಚೀನಾ ತನ್ನ ನಡೆಯನ್ನು ಸಮರ್ಥಿಸಿಕೊಂಡಿದೆ. 
ಮಸೂದ್ ಅಜರ್ ಗೆ ನಿಷೇಧ ಕೇಳುತ್ತಿರುವ ರಾಷ್ಟ್ರಗಳಿಗೆ ಹಾಗೂ ಎಲ್ಲರಿಗೂ ಒಪ್ಪಿಗೆಯಾಗುವಂತಹ ದೀರ್ಘಾವಧಿಯ ಪರಿಹಾರ ಕಂಡುಕೊಳ್ಳುವುದಕ್ಕೆ ಸಹಕರಿಸುವುದಾಗಿ ಚೀನಾ ಹೇಳಿದೆ. 
ಸಮಿತಿಯ ನಿಯಮಗಳನ್ನು ಆಧರಿಸಿ ಚೀನಾ ಮಸೂದ್ ಅಜರ್ ವಿಷಯದಲ್ಲಿ ನಿರ್ಧಾರ ಕೈಗೊಂಡಿದೆ ಎಂದು ಚೀನಾದ ವಿದೇಶಾಂಗ ಇಲಾಖೆ ವಕ್ತಾರ ಲು ಕಾಂಗ್, ತನ್ನ ದೇಶದ ಸಮಿತಿ ಕೈಗೊಂಡಿರುವ ನಿರ್ಧಾರದಿಂದ ಸಂಬಂಧಪಟ್ಟ ರಾಷ್ಟ್ರಗಳು ಮಾತುಕತೆ ಮೂಲಕ ದೀರ್ಘಾವಧಿಯ ಪರಿಹಾರ ಕಂಡುಕೊಳ್ಳುವುದಕ್ಕೆ ಸಾಧ್ಯವಾಗಲಿದೆ, ಈ ಮೂಲಕ ಪ್ರಾದೇಶಿಕ ಸ್ಥಿರತೆ ಹಾಗೂ ಶಾಂತಿ ನೆಲೆಸಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. 
SCROLL FOR NEXT