ಶಶಿ ತರೂರ್ 
ದೇಶ

ಕೇರಳದಲ್ಲಿ ಕಾಂಗ್ರೆಸ್‌ಗೆ ಮತ್ತೆ ಹೊಡೆತ: ಶಶಿ ತರೂರ್ ಚಿಕ್ಕಪ್ಪ-ಚಿಕ್ಕಮ್ಮ ಬಿಜೆಪಿಗೆ ಸೇರ್ಪಡೆ

ಸೋನಿಯಾ ಆಪ್ತರಾಗಿದ್ದ ಕೇರಳ ಕಾಂಗ್ರೆಸ್ ಮುಖಂಡ ಟಾಮ್ ವಡಕ್ಕನ್ ಗುರುವಾರ ಬಿಜೆಪಿಗೆ ಸೇರ್ಪಡೆಯಾಗಿರುವ ಬೆನ್ನಲ್ಲೇ ಶುಕ್ರವಾರ ತಿರುವನಂತಪುರಂ ಸಂಸದ, ಕಾಂಗ್ರೆಸ್ ....

ಕೊಚ್ಚಿನ್: ಸೋನಿಯಾ ಆಪ್ತರಾಗಿದ್ದ ಕೇರಳ ಕಾಂಗ್ರೆಸ್ ಮುಖಂಡ ಟಾಮ್ ವಡಕ್ಕನ್ ಗುರುವಾರ ಬಿಜೆಪಿಗೆ ಸೇರ್ಪಡೆಯಾಗಿರುವ ಬೆನ್ನಲ್ಲೇ ಶುಕ್ರವಾರ ತಿರುವನಂತಪುರಂ ಸಂಸದ, ಕಾಂಗ್ರೆಸ್ ಮುಖಂಡ  ಶಶಿ ತರೂರ್ ಅವರ  ಸಮೀಪ ಸಂಬಂಧಿಗಳೂ ಸಹ ಬಿಜೆಪಿ ಸದಸ್ಯತ್ವ ಪಡೆದುಕೊಂಡಿದ್ದಾರೆ. 
ತರೂರ್ ಅವರ ಚಿಕ್ಕಮ ಹಾಗೂ ಚಿಕ್ಕಪ್ಪ ಇಂದು ಕೊಚ್ಚಿನ್ ನಲ್ಲಿ ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ.
ತರೂರ್ ಅವರ ತಾಯಿಯ ಸೋದರಿ ಶೋಭನಾ ಶಶಿಕುಮಾರ್ ಹಾಗೂ ಅವರ ಪತಿ ಶಶಿಕುಮಾರ್  ಸೇರಿದಂತೆ ಇತರೆ 13 ಮಂದಿಯನ್ನು ಕೇರಳ ಬಿಜೆಪಿ ಅಧ್ಯಕ್ಷ  ಪಿಎಸ್ ಶ್ರಿಧರನ್ ಪಿಳ್ಳೈ ಕಮಲ ಪಕ್ಷಕ್ಕೆ ಸ್ವಾಗತಿಸಿದ್ದಾರೆ.
ಬಿಜೆಪಿ ಸದಸ್ಯತ್ವ ಪಡೆದ ಬಳಿಕ ಮಾತನಾಡಿದ ಶೋಭನಾ ಹಾಗೂ ಶಶಿಕುಮಾರ್ ದಂಪತಿಗಳು ತಾವು ಅನೇಕ ವರ್ಷಗಳಿಂದಲೂ ಭಾರತೀಯ ಜನತಾ ಪಕ್ಷದ  ಸಿದ್ಧಾಂತವನ್ನು ಅನುಸರಿಸುತ್ತಾ ಬಂದಿರುವುದಾಗಿ ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

INDIA ಬ್ಲಾಕ್ ನಲ್ಲಿ ಬಿರುಕು?: ಆಪ್ ಕೈ ಕೊಟ್ಟ ಬೆನ್ನಲ್ಲೇ ಭೋಜನ ಕೂಟಕ್ಕೆ ಸಮಾಜವಾದಿ ಪಕ್ಷ ಗೈರು!

ರಾಹುಲ್, ಪ್ರಿಯಾಂಕಾ ಗಾಂಧಿಯನ್ನು ಎಳೆದೊಯ್ದು ವಶಕ್ಕೆ ಪಡೆದ ಪೊಲೀಸರು; ಬಸ್‌ನ ಟೈರ್ ಪಂಕ್ಚರ್ ಮಾಡಿದ ಕಾರ್ಯಕರ್ತರು

ಭಾರತವನ್ನು ಜಾಗತಿಕ ಶಕ್ತಿಯಾಗಿಸಿದ್ದು ಮೋದಿ, ಅಂತಹವರ ವಿರುದ್ಧವೇ ಸಂಚು: ಸರ್ಬಿಯಾ ಮಾಜಿ ಅಧ್ಯಕ್ಷ, Video ವೈರಲ್

SIR ವಿರುದ್ಧ ಕಾಂಗ್ರೆಸ್ ಪ್ರತಿಭಟನೆ: ಡಿಎಂಕೆ ಯು-ಟರ್ನ್!

ಗ್ರಾಹಕರಿಗೆ ನೆಮ್ಮದಿ: ಕಟಾವಿಗೆ ಬಂದ ಖಾರಿಫ್ ಬೆಳೆ, ಕರ್ನಾಟಕ ಸೇರಿ ಹಲವು ರಾಜ್ಯಗಳಲ್ಲಿ ಈರುಳ್ಳಿ ದರ ಕುಸಿತ ಸಾಧ್ಯತೆ, 2 ಲಕ್ಷ ಕ್ವಿಂಟಾಲ್‌ ಪೂರೈಕೆ!