ಆರ್‌.ಪಿ.ಶರ್ಮಾ 
ದೇಶ

ಬಿಜೆಪಿ ಸದಸ್ಯತ್ವಕ್ಕೆ ರಾಜಿನಾಮೆ ನೀಡಿದ ತೇಜ್ಪುರ ಸಂಸದ ಶರ್ಮಾ

ಅಸ್ಸಾಂನ ತೇಜ್‌ಪುರ್‌ ಕ್ಷೇತ್ರದ ಸಂಸದ ಮತ್ತು ಹಿರಿಯ ಮುಖಂಡ ಆರ್‌.ಪಿ.ಶರ್ಮಾ, ಬಿಜೆಪಿ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ..

ಗುವಾಹತಿ: ಅಸ್ಸಾಂನ ತೇಜ್‌ಪುರ್‌ ಕ್ಷೇತ್ರದ ಸಂಸದ ಮತ್ತು ಹಿರಿಯ ಮುಖಂಡ ಆರ್‌.ಪಿ.ಶರ್ಮಾ, ಬಿಜೆಪಿ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಮುಂಬರುವ ಲೋಕಸಭೆ ಚುನಾವಣೆಯ ಸ್ಪರ್ಧಿಗಳ ಪಟ್ಟಿಯಲ್ಲಿ ತಮ್ಮ ಹೆಸರು ಇಲ್ಲ ಎಂಬ ಕಾರಣಕ್ಕೆ ಪಕ್ಷ ತೊರೆದಿರುವುದಾಗಿ ಹೇಳಿದ್ದಾರೆ.
ಈ ಬಗ್ಗೆ ಫೇಸ್‌ಬುಕ್‌ನಲ್ಲಿ ಬರೆದುಕೊಂಡಿರುವ ಶರ್ಮಾ, ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡಿರುವುದಾಗಿ ತಿಳಿಸಿದ್ದಾರೆ.
ಆರ್‌ಎಸ್‌ಎಸ್‌/ವಿಎಚ್‌ಪಿಯಲ್ಲಿ 15 ವರ್ಷ ಮತ್ತು ಬಿಜೆಪಿಯಲ್ಲಿ 29 ವರ್ಷ ಸೇವೆ ಸಲ್ಲಿಸಿದ ಬಳಿಕ ಪಕ್ಷದ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದೇನೆ. ಹಾಲಿ ಸಂಸದನಾಗಿ ನನ್ನ ಹೆಸರನ್ನು ಸಂಭಾವ್ಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಸೇರಿಸದಿರುವುದರಿಂದ ಅವಮಾನವಾಗಿದೆ’ ಎಂದು ಬರೆದುಕೊಂಡಿದ್ದಾರೆ.
ತೇಜ್‌ಪುರದಿಂದ ರಾಜ್ಯ ಸಚಿವ ಡಾ.ಹಿಮವಂತ್‌ ಬಿಸ್ವಾ ಹೆಸರನ್ನು ಪ್ರಸ್ತಾಪಿಸಲಾಗಿದ್ದು, ಅವರಿಗೆ ಟಿಕೆಟ್‌ ನೀಡುತ್ತಾರೆ ಎನ್ನಲಾಗಿದೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

“ಜನರಿಗೆ ದ್ರೋಹ ಮಾಡುವುದೇ ಕಾಂಗ್ರೆಸ್ ಕೆಲಸ”, ಜನರ ಸಮಸ್ಯೆಗಿಂತ ಅಧಿಕಾರದ ಜಗಳವೇ ಮುಖ್ಯವಾಗಿದೆ: ಪ್ರಧಾನಿ ಮೋದಿ ವಾಗ್ದಾಳಿ

“ನನ್ನ ಹೃದಯದಲ್ಲಿ ನೆಲೆಸಿರುವ ಪ್ರೀತಿಯ ಜನರೇ…”: ಭಾವನಾತ್ಮಕ ಭಾಷಣದೊಂದಿಗೆ ಆಡಳಿತ ಆರಂಭಿಸಿದ ಸಿಎಂ ವಿಜಯ್, ಉಚಿತ ವಿದ್ಯುತ್ ಯೋಜನೆಗೆ ಅನುಮೋದನೆ..!

ತಮಿಳುನಾಡಿನಲ್ಲಿ ‘ದಳಪತಿ’ ವಿಜಯ್ ರಾಜ್ಯಭಾರ: ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕಾರ, MGR-ಜಯಲಲಿತಾ ಬಳಿಕ CM ಗದ್ದುಗೆ ಏರಿದ ಮತ್ತೊಬ್ಬ ಸಿನಿ ದಿಗ್ಗಜ..!

Tamil Nadu swearing-in ceremony: ವಿಜಯ ಜೊತೆ 9 ಸಚಿವರು ಪ್ರಮಾಣ ವಚನ, ಚೆನ್ನೈಯಲ್ಲಿ ಕಾರ್ಯಕ್ರಮಕ್ಕೆ ಭಾರೀ ಭದ್ರತೆ-Video

D Sudhakar: ಚಿಕಿತ್ಸೆ ಫಲಕಾರಿಯಾಗದೆ ಸಚಿವ ಸುಧಾಕರ್ ನಿಧನ

SCROLL FOR NEXT