ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ದೇಶ

ಟ್ವಿಟರ್ ನಲ್ಲಿ'ಚೌಕಿದಾರ್ ಫಿರ್ ಸೇ' ಹ್ಯಾಶ್ ಟ್ಯಾಗ್ ನಂ.1 ಟ್ರೆಂಡಿಂಗ್

ಪ್ರಧಾನಿ ನರೇಂದ್ರ ಮೋದಿ ಅವರ 'ಮೈ ಭೀ ಚೌಕಿದಾರ್ ' ಟ್ವಿಟರ್ ನಲ್ಲಿ ಟಾಪ್ ಟ್ರೆಂಡ್ ಆಗಿದ್ದು, ದೇಶ, ವಿದೇಶದಲ್ಲೂ ಟಾಪ್ ಟ್ರೆಂಡ್ ಆಗಿದೆ.

ಮೋದಿ, ಅಮಿತ್ ಶಾ ಟ್ವಿಟರ್ ಖಾತೆ ಚಿತ್ರ
Nagaraja AB
Updated On : 17 Mar 2019, 5:24 am
ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ 'ಮೈ ಭೀ ಚೌಕಿದಾರ್ ' ಟ್ವಿಟರ್ ನಲ್ಲಿ ಟಾಪ್ ಟ್ರೆಂಡ್ ಆಗಿದ್ದು, ದೇಶ, ವಿದೇಶದಲ್ಲೂ ಟಾಪ್ ಟ್ರೆಂಡ್ ಆಗಿದೆ.
ಇದೇ ರೀತಿ ಇಂದು ಚೌಕಿದಾರ್ ಫಿರ್ ಸೇ ಹ್ಯಾಶ್ ಟಾಗ್ ಸದ್ಯ ದೇಶದಲ್ಲಿ ನಂಬರ್ 1 ಟ್ರೆಂಡ್ ಆಗಿದೆ. ಅಲ್ಲದೇ ವಿಶ್ವದಾದ್ಯಂತ ಹಲವು ಗಂಟೆಗಳ ಕಾಲ ಟಾಪ್ ಟ್ರೆಂಡ್ ಆಗಿದ್ದ #chowkidarphirse ಸದ್ಯ ನಂ.2 ಸ್ಥಾನದಲ್ಲಿದ್ದು,ಲಕ್ಷಾಂತರ ನೆಟ್ಟಿಗರು ಈ ಬಗ್ಗೆ ಟ್ವೀಟ್ ಮಾಡುತ್ತಿದ್ದಾರೆ.
ಬಿಜೆಪಿಯ ಹಲವು ನಾಯಕರು ಅಷ್ಟೇ ಅಲ್ಲದೇ ಪ್ರಧಾನಿ ಮೋದಿ, ಕೇಸರಿ ಪಕ್ಷದ ಹಲವು ಬೆಂಬಲಿಗರು ಸಹ ಟ್ವಿಟರ್ ಖಾತೆಯಲ್ಲಿ ತಮ್ಮ ಹೆಸರಿನ ಜೊತೆಗೆ ಚೌಕಿದಾರ್ ಎಂದು ಆರಂಭದಲ್ಲಿ ಸೇರಿಸಿಕೊಂಡಿದ್ದಾರೆ.

Advertisement

Advertisement

ಚೌಕಿದಾರ್ ಫಿರ್ ಸೇ ಎಂಬ ಹ್ಯಾಶ್ ಟ್ಯಾಗ್ ಬಳಸಿಕೊಂಡು ಸುಮಾರು ಒಂದೂವರೆ ಲಕ್ಷದಷ್ಟೂ ಟ್ವೀಟ್ ಗಳು ಹರಿದಾಡುತ್ತಿದ್ದು, ಟ್ವಿಟರ್ ನಲ್ಲಿ ಟಾಪ್ ಟ್ರೆಂಡಿಂಗ್ ಆಗಿದೆ. ಅಲ್ಲದೇ  ಪ್ರಧಾನಿ ಮೋದಿ ಟ್ವೀಟರ್ ಖಾತೆಯಲ್ಲಿ ತಮ್ಮ ಹೆಸರನ್ನು ಚೌಕಿದಾರ್ ನರೇಂದ್ರ ಮೋದಿ ಎಂದು ಬದಲಾಯಿಸಿಕೊಂಡಿದ್ದು,#ChowkidarNarendramodi ಎಂಬ ಹ್ಯಾಶ್ ಟ್ಯಾಗ್ ಸದ್ಯ ಟ್ವಿಟರ್ ನಲ್ಲಿ ಟಾಪ್ 2 ಟ್ರೆಂಡಿಂಗ್ ಆಗಿದೆ. ಈ ಬಗ್ಗೆ ಇದವರೆಗೂ ಸುಮಾರು 10 ಸಾವಿರ ಮಂದಿ ನೆಟ್ಟಿಗರು ಟ್ವೀಟ್ ಮಾಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement