ದೇಶ

ಉಗ್ರರ ಬುಡಕ್ಕೆ ಬಿತ್ತು ಬೆಂಕಿ: ಹಿಜ್ಬುಲ್ ಮುಜಾಹಿದ್ದೀನ್ ಉಗ್ರನಿಗೆ ನೆರವಾಗುತ್ತಿದ್ದ 13 ಆಸ್ತಿಗಳು ಇಡಿ ವಶಕ್ಕೆ!

Srinivas Rao BV
ನವದೆಹಲಿ: ಉಗ್ರರ ಆರ್ಥಿಕ ಮೂಲಕ್ಕೆ ಕತ್ತರಿ ಹಾಕುವಲ್ಲಿ ನಿರತವಾಗಿರುವ ಜಾರಿ ನಿರ್ದೇಶನಾಲಯ, ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಮುಖ್ಯಸ್ಥನಿಗೆ ಭರ್ಜರಿ ಶಾಕ್ ನೀಡಿದೆ. 
ಭಯೋತ್ಪಾದಕರ ಆರ್ಥಿಕ ನೆರವಿಗೆ ಸಂಬಂಧಪಟ್ಟ ಪ್ರಕರಣದ ತನಿಖೆ ನಡೆಸುತ್ತಿದ್ದ ಜಾರಿ ನಿರ್ದೇಶನಾಲಯ ಜಮ್ಮು-ಕಾಶ್ಮೀರದಲ್ಲಿ ಒಟ್ಟಾರೆ 1.22 ಕೋಟಿ ರೂಪಾಯಿ ಮೌಲ್ಯದ ಆಸ್ತಿಗಳನ್ನು ತನ್ನ ವಶಕ್ಕೆ ಪಡೆದಿದೆ. ಇದರಿಂದಾಗಿ ಜಾಗತಿಕವಾಗಿ ಈಗಾಗಲೇ ನಿಷೇಧಕ್ಕೊಳಗಾಗಿರುವ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಮುಖ್ಯಸ್ಥ ಸಯೀದ್ ಸಲಾಲುದ್ದೀನ್ ಆರ್ಥಿಕ ಮೂಲಕ್ಕೆ  ಹೊಡೆತ ಬಿದ್ದಂತಾಗಿದೆ. ಬಂಡೀಪೋರಾದಲ್ಲಿ ವಶಕ್ಕೆ ಪಡೆಯಲಾದ ಆಸ್ತಿ ಅಲ್ಲಿನ ಸ್ಥಳೀಯ ನಿವಾಸಿ ಮೊಹಮ್ಮದ್ ಶಫಿ ಶಾ ಹಾಗೂ ಇತರ 6 ಜನಕ್ಕೆ ಸೇರಿದ್ದಾಗಿದೆ. ಈ ಎಲ್ಲರೂ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಗೆ ಕೆಲಸ ಮಾಡುತ್ತಿದ್ದರು. ಜಮ್ಮು-ಕಾಶ್ಮೀರದಲ್ಲಿ ಸಕ್ರಿಯವಾಗಿರುವ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆ ಜಮ್ಮು-ಕಾಶ್ಮೀರದಲ್ಲಿ ಉಗ್ರರಿಗೆ ಹಾಗೂ ಪ್ರತ್ಯೇಕತಾವಾದಿಗಳಿಗೆ ಆರ್ಥಿಕ ನೆರವು ನೀಡುವುದರಲ್ಲೂ ಪ್ರಮುಖ ಪಾತ್ರ ವಹಿಸಿತ್ತು. ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ಸಂಘಟನೆಯ ಆರ್ಥಿಕ ವ್ಯವಹಾರಗಳನ್ನು ಜಮ್ಮು-ಕಾಶ್ಮೀರ ಪೀಡಿತ ಪರಿಹಾರ ಟ್ರಸ್ಟ್ ಮೂಲಕ ನೋಡಿಕೊಳ್ಳಲಾಗುತ್ತಿತ್ತು ಎಂದು ಜಾರಿ ನಿರ್ದೇಶನಾಲಯ ಹೇಳಿದೆ. 
SCROLL FOR NEXT