ದೇಶ

ವಿಚಾರಣೆಗಾಗಿ ರಾಬರ್ಟ್ ವಾದ್ರಾ ವಶಕ್ಕೆ ಪಡೆಯಲು ಇಡಿ ನ್ಯಾಯಾಲಯಕ್ಕೆ ಮನವಿ

Nagaraja AB

ನವದೆಹಲಿ: ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋನಿಯಾಗಾಂಧಿ ಅಳಿಯ ರಾಬರ್ಟ್ ವಾದ್ರಾ ಅವರ ನಿರೀಕ್ಷಣಾ ಜಾಮೀನು ಅವಧಿಯನ್ನು ಮಾರ್ಚ್ 25ರವರೆಗೂ  ವಿಸ್ತರಿಸಿ ದೆಹಲಿಯ ನ್ಯಾಯಾಲಯವೊಂದು ಆದೇಶ ನೀಡಿದೆ. ವಿಶೇಷ ಜಡ್ಜ್  ಅರವಿಂದ್ ಕುಮಾರ್ ರಾಬರ್ಟ್ ವಾದ್ರಾ ಅವರಿಗೆ ರಿಲೀಪ್ ನೀಡಿದ್ದಾರೆ.

ವಿಚಾರಣೆಗಾಗಿ ರಾಬರ್ಟ್ ವಾದ್ರಾ ಅವರನ್ನು ವಶಕ್ಕೆನೀಡುವಂತೆ ಜಾರಿ ನಿರ್ದೇಶನಾಲಯ ಕೇಳಿಕೊಂಡ ನಂತರ ತನಿಖೆಗೆ ಸಹಕರಿಸುವಂತೆ ನ್ಯಾಯಾಧೀಶರು ಆದೇಶಿಸಿದ್ದಾರೆ.

ಲಂಡನ್ ಮೂಲದ 1.9 ಮಿಲಿಯನ್ ಪೌಂಡ್ ಮೊತ್ತದ ಆಸ್ತಿ ಖರೀದಿಗೆ ಸಂಬಂಧಿಸಿದ ಹಣ ವರ್ಗಾವಣೆ ಪ್ರಕರಣದಲ್ಲಿ ವಾದ್ರಾ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಇಲ್ಲಿಯವರೆಗೂ ರಾಬರ್ಟ್ ವಾದ್ರಾ ಅವರನ್ನು ಬಂಧಿಸದಂತೆ ನ್ಯಾಯಾಲಯ ಫೆಬ್ರವರಿ 16 ರಂದು ಭದ್ರತೆಯನ್ನು ವಿಸ್ತರಿಸಿತ್ತು.

ಲಂಡನ್ ನಲ್ಲಿ ರಾಬರ್ಟ್ ವಾದ್ರಾ ಅವರಿಗೆ ಸೇರಿರುವ ಎರಡರಿಂದ ಮೂರು ಮನೆ, ಆರು ಫ್ಲಾಟ್ ಸೇರಿದಂತೆ ಇನ್ನಿತರ ಆಸ್ತಿಪಾಸ್ತಿ ಇರುವ ಬಗ್ಗೆ ಮಾಹಿತಿ ಪಡೆದಿರುವುದಾಗಿ ಇಡಿ ನ್ಯಾಯಾಲಯಕ್ಕೆ ತಿಳಿಸಿತ್ತು
SCROLL FOR NEXT