ದೇಶ

ನೀರವ್ ಮೋದಿ ಬಂಧನದ ಕೀರ್ತಿ ಯಾರಿಗೆ ಸಲ್ಲಬೇಕು ಅಂತ ಒಮರ್ ಅಬ್ದುಲ್ಲಾ ಹೇಳಿದ್ದಾರೆ ಕೇಳಿ...

Srinivas Rao BV
ಶ್ರೀನಗರ:  ಪಂಜಾಬ್ ನ್ಯಾಷನಲ್ ಬ್ಯಾಂಕ್‌ ಗೆ 13 ಸಾವಿರ ಕೋಟಿ ರೂಪಾಯಿ ವಂಚನೆ ಮಾಡಿ, ವಿದೇಶದಲ್ಲಿ ತಲೆಮರೆಸಿಕೊಂಡಿದ್ದ ವಜ್ರದ ವ್ಯಾಪಾರಿ ನೀರವ್ ಮೋದಿ ಬಂಧನದ ಹಿಂದೆ ಪ್ರಧಾನಿ ಮೋದಿ ಅಥವಾ ಕೇಂದ್ರ ಸರ್ಕಾರದ ಯಾವುದೇ ಪಾತ್ರ ಇಲ್ಲ ಎಂದು ಜಮ್ಮು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಹೇಳಿದ್ದಾರೆ.
ನೀರವ್ ಮೋದಿ ಬಂಧನದ ಸಂಪೂರ್ಣ ಕ್ರೆಡಿಟ್‌ ಲಂಡನ್ ಮೂಲದ ಪತ್ರಿಕೆಗೆ ಸಲ್ಲಬೇಕೇ ಹೊರತು, ಈ ವಿಚಾರದಲ್ಲಿ ಮೋದಿ ಯಾವುದೇ ಪ್ರಯತ್ನ ನಡೆಸಿಲ್ಲ ಎಂದು ಅವರು ಹೇಳಿದರು. 
ದೇಶದಿಂದ ತಲೆಮರೆಸಿಕೊಂಡಿದ್ದ ನೀರವ್ ಮೋದಿ ಬಂಧನಕ್ಕೆ ಕಾರಣವಾಗಿರುವುದು ಲಂಡನ್‌ ನ ಟೆಲಿಗ್ರಾಫ್ ಪತ್ರಿಕೆ ಮತ್ತು ಅದರ ವರದಿಗಾರ. ಈ ಹಿನ್ನೆಲೆಯಲ್ಲಿ ಇದರ ಕೀರ್ತಿ, ಪತ್ರಿಕೆ ಮತ್ತು ವರದಿಗಾರನಿಗೆ ಸಲ್ಲಬೇಕೇ ಹೊರತು ಪ್ರಧಾನಿ ಮೋದಿ ಪಡೆಯುವುದು ಸರಿಯಲ್ಲ ಎಂದು ಅವರು ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ.
ಕಳೆದ ಒಂದು ವರ್ಷಗಳಿಂದ ತಲೆಮರೆಸಿಕೊಂಡಿದ್ದ ನೀರವ್ ಮೋದಿ ಅವರನ್ನು ಲಂಡನ್‌ ನಲ್ಲಿ ಬಂಧಿಸಲಾಗಿದೆ. ಲಂಡನ್‌ನ ವೆಸ್ಟ್‌ ಎಂಡ್‌ ಐಷಾರಾಮಿ ಬಂಗಲೆಯಲ್ಲಿ ವೈಭೋವೋಪೇತ ಜೀವನ ನಡೆಸುತ್ತಿದ್ದಾರೆ ಎಂದು ಲಂಡನ್ ಪತ್ರಿಕೆ ವರದಿ ಮಾಡಿ ಅಂತಿಮವಾಗಿ ಬಂಧನಕ್ಕೆ ಸಹಕಾರಿಯಾಗಿದೆ.
SCROLL FOR NEXT