ದೇಶ

ಬಾಲಾಕೋಟ್ ವಾಯುದಾಳಿ ಪ್ರಶ್ನಿಸಿದ ಸ್ಯಾಮ್ ಪಿತ್ರೋಡಾ,ಭಾರತೀಯರು ಕ್ಷಮಿಸಲ್ಲ- ಪ್ರಧಾನಿ ಮೋದಿ

Nagaraja AB

ನವದೆಹಲಿ: ಪಾಕಿಸ್ತಾನದ ಬಾಲಾಕೋಟ್ ನಲ್ಲಿ ಕಳೆದ ತಿಂಗಳು ನಡೆದಿದ್ದ ವಾಯು ದಾಳಿ ಪ್ರಶ್ನಿಸಿರುವ ಎಐಸಿಸಿ ಮುಖ್ಯಸ್ಥ ರಾಹುಲ್ ಗಾಂಧಿ ಆಪ್ತ ಸ್ಯಾಮ್ ಪಿತ್ರೋಡಾ ವಿರುದ್ಧ ಪ್ರಧಾನಿ ಮೋದಿ  ವಾಗ್ದಾಳಿ ನಡೆಸಿದ್ದಾರೆ.

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ವಿಶ್ವಾಸಾರ್ಹ ಸಲಹೆಗಾರ ಹಾಗೂ ಮಾರ್ಗದರ್ಶಕರು, ಕಾಂಗ್ರೆಸ್ ಪರ ಪಾಕಿಸ್ತಾನ ರಾಷ್ಟ್ರೀಯ ದಿನ ಸಂಭ್ರಮಿಸುವವರು ಭಾರತೀಯ ವಾಯುದಾಳಿ ಬಗ್ಗೆ ಪ್ರಶ್ನಿಸುವುದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಮೋದಿ ಟ್ವೀಟ್ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆ.

ಸರಣಿ ಟ್ವಿಟ್  ಮಾಡಿರುವ ಪ್ರಧಾನಿ ಮೋದಿ, ಉಗ್ರರ ವಿರುದ್ಧದ ದಾಳಿಗೆ ಕಾಂಗ್ರೆಸ್ ಯಾವ ರೀತಿ ಪ್ರತಿಕ್ರಿಯೆ ನೀಡಿದೆ ಎಂಬುದು ಇಡೀ ರಾಷ್ಟ್ರಕ್ಕೆ ಗೊತ್ತಿದೆ. ಇದು ನವ ಭಾರತ, ಉಗ್ರರಿಗೆ ಅವರ ಭಾಷೆಯಲ್ಲಿಯೇ ಉತ್ತರ ನೀಡಿದ್ದೇವೆ, ಹಿತದೃಷ್ಟಿಯಿಂದ ಅವರು ಕೂಡಾ ಇದನ್ನು ಅರ್ಥಮಾಡಿಕೊಂಡಿದ್ದಾರೆ ಎಂದಿದ್ದಾರೆ.

ಪ್ರತಿಪಕ್ಷಗಳು ಭಾರತೀಯ ಸೇನೆ ಬಗ್ಗೆ ಆಗಾಗ್ಗೆ ಅಪಮಾನ ಮಾಡುತ್ತಲೇ ಇವೆ.ಪ್ರತಿಪಕ್ಷಗಳ ನಾಯಕರ ಹೇಳಿಕೆಯನ್ನು ಪ್ರಶ್ನಿಸುವಂತೆ ಭಾರತೀಯರಲ್ಲಿ ಮನವಿ ಮಾಡಿಕೊಳ್ಳುತ್ತೇವೆ.  ಇಡೀ ದೇಶ ಸೈನಿಕರ ಪರವಾಗಿರುವುದು ಪ್ರತಿಪಕ್ಷಗಳ ಮುಠಾಳತನವನ್ನು 130 ಕೋಟಿ ಭಾರತೀಯರು ಮನ್ನಿಸುವುದು ಅಥವಾ ಮರೆಯುುದಿಲ್ಲ ಎಂದು ಹೇಳಬೇಕಾಗಿದೆ ಎಂದು  ಮೋದಿ ಹೇಳಿದ್ದಾರೆ.
ಸಾಗರೋತ್ತರ ಕಾಂಗ್ರೆಸ್ ಮುಖ್ಯಸ್ಥರಾಗಿರುವ ಸ್ಯಾಮ್ ಪೀತ್ರೋಡಾ, ಎಎನ್ ಐ ಸುದ್ದಿಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ  ಬಾಲಾಕೋಟ್ ವಾಯುದಾಳಿಯಲ್ಲಿ ಉಗ್ರರ ಸಾವನ್ನು ಪ್ರಶ್ನಿಸಿದ್ದರಲ್ಲದೇ,ಒಂದು ವೇಳೆ 300 ಉಗ್ರರು ಮೃತಪಟ್ಟಿದ್ದರೆ ಸಾಕ್ಷಿ ನೀಡುವಂತೆ ಕೇಳಿದ್ದರು
SCROLL FOR NEXT