ಮುಂಬೈ: ಮಹಾರಾಷ್ಟ್ರ ಮಾಜಿ ಮುಖ್ಯಮಂತ್ರಿ ಹಾಗೂ ಮಹಾರಾಷ್ಟ್ರ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಅಶೋಕ್ ಚವಾಣ್ ಅವರು ಮಾತುಗಳು ಕೇಳಿಬರುತ್ತಿದ್ದು, ಇದಕ್ಕೆ ಸಂಬಂಧಿಸಿದ ಆಡಿಯೋ ಕ್ಲಿಪ್ ವೊಂದು ವೈರಲ್ ಆಗಿದೆ.
ಚಂದ್ರಪುರ್ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಆಯ್ಕೆಗೆ ಸಂಬಂಧಿಸಿದಂತೆ ಮಾಜಿ ಸಿಎಂ ಅಶೋಕ್ ಚವಾಣ್ ಅಸಮಾಧಾನಗೊಂಡಿದ್ದು, ಪಕ್ಷದಲ್ಲಿ ಯಾರೂ ನನ್ನ ಮಾತು ಕೇಳುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.
ಚಂದ್ರಪುರ್ ಕ್ಷೇತ್ರದಲ್ಲಿ ನಾಗಪುರ್ ಮಾಜಿ ಸಂಸದ ವಿಲಾಸ್ ಮಟ್ಟೆಮ್ವಾರ್ ಅವರ ಪುತ್ರ ವಿಶಾಲ್ ಗೆ ಟಿಕೆಟ್ ನೀಡಲು ಪಕ್ಷ ನಿರ್ಧರಿಸಿದೆ. ಆದರೆ ಇದಕ್ಕೆ ವಿರೋಧ ವ್ಯಕ್ತಪಡಿಸಿರುವ ಅಶೋಕ್ ಚವಾಣ್, ಈ ಬಗ್ಗೆ ನಾನು ವಿವರಿಸಲು ಯತ್ನಿಸಿದ್ದೇನೆ. ಅಲ್ಲದೆ ನಾನು ರಾಜೀನಾಮೆ ನೀಡುವ ಬಗ್ಗೆ ಯೋಚಿಸುತ್ತಿದ್ದೇನೆ ಎಂದು ಹೇಳಿದ್ದು, ಅದರ ಆಡಿಯೋ ಈಗ ವೈರಲ್ ಆಗಿದೆ.
ಆಡಿಯೋ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅಶೋಕ್ ಚವಾಣ್ ಅವರು, ಅದೊಂದು ಖಾಸಗಿ ಸಂಭಾಷಣೆ. ಅದನ್ನು ಸಾರ್ವಜನಿಕಗೊಳಿಸಲು ಬಯಸುವುದಿಲ್ಲ ಮತ್ತು ಅದು ಆಂತರಿಕ ವಿಚಾರ ಎಂದಿದ್ದಾರೆ.
ಕಾಂಗ್ರೆಸ್ ಮಹಾರಾಷ್ಟ್ರ ಐದು ಕ್ಷೇತ್ರಗಳ ಅಭ್ಯರ್ಥಿಗಳು ಸೇರಿದಂತೆ 35 ಅಭ್ಯರ್ಥಿಗಳ ಪಟ್ಟಿಯನ್ನು ಶುಕ್ರವಾರ ಬಿಡುಗಡೆ ಮಾಡಿದ್ದು, ಅಶೋಕ್ ಚವಾಣ್ ಪ್ರತಿನಿಧಿಸುತ್ತಿರುವ ನಾಂದೇಡ್ ಕ್ಷೇತ್ರಕ್ಕೆ ಇನ್ನೂ ಅಭ್ಯರ್ಥಿಯನ್ನು ಘೋಷಿಸಿಲ್ಲ.
ಈಗಾಗಲೇ ಮಹಾರಾಷ್ಟ್ರ ವಿಧಾನಸಭೆ ಪ್ರತಿಪಕ್ಷ ನಾಯಕ ರಾಧಾಕೃಷ್ಣ ವಿಖೆ ಪಾಟೀಲ್ ಅವರು ತಮ್ಮ ಹುದ್ದೆಗೆ ರಾಜಿನಾಮೆ ನೀಡಿದ್ದು, ಅವರ ಪುತ್ರ ಸುಜಯ್ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದ್ದಾರೆ.
ಮಹಾಘಟಬಂಧನದ ಮೂಲಕವಾದರೂ ಬಿಜೆಪಿ ಹಾಗೂ ಪ್ರಧಾನಿ ಮೋದಿ ಅವರನ್ನು ಮಣಿಸಬೇಕು ಎಂದುಕೊಂಡಿದ್ದ ಕಾಂಗ್ರೆಸ್‌ಗೆ ಆಘಾತದ ಮೇಲೆ ಆಘಾತಗಳು ಉಂಟಾಗುತ್ತಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics