ರಣದೀಪ್ ಸುರ್ಜೆವಾಲ 
ದೇಶ

ಬಿಎಸ್ ಯಡಿಯೂರಪ್ಪ ಡೈರಿ ಕೆದಕಿ ತಾನೇ ತೊಡಿದ ಖೆಡ್ಡಕ್ಕೆ ಬೀಳುತ್ತಿದೆಯಾ ಕಾಂಗ್ರೆಸ್?

ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಎರಡು ವರ್ಷಗಳ ಹಳೆಯ ಪ್ರಕರಣ ಅಪ್ತ ಡೈರಿಯನ್ನು ಕೆದಕುವ ಮೂಲಕ ಕಾಂಗ್ರೆಸ್ ಬಿಜೆಪಿ ವಿರುದ್ಧ ಭ್ರಷ್ಟಾಚಾರದ ಅಸ್ತ್ರ ಪ್ರಯೋಗಿಸಲು...

ನವದೆಹಲಿ: ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಎರಡು ವರ್ಷಗಳ ಹಳೆಯ ಪ್ರಕರಣ ಅಪ್ತ ಡೈರಿಯನ್ನು ಕೆದಕುವ ಮೂಲಕ ಕಾಂಗ್ರೆಸ್ ಬಿಜೆಪಿ ವಿರುದ್ಧ ಭ್ರಷ್ಟಾಚಾರದ ಅಸ್ತ್ರ ಪ್ರಯೋಗಿಸಲು ಮುಂಗಾದಿದ್ದು ಇದೀಗ ಇದು ಕಾಂಗ್ರೆಸ್ ಗೆ ಮುಳುವಾಗುವ ಸಾಧ್ಯತೆಗಳಿವೆ.
2017ರ ಆಗಸ್ಟ್ 2ರಂದು ಡಿಕೆ ಶಿವಕುಮಾರ್ ಅವರ ಮನೆ ಮೇಲೆ ಐಟಿ ರೇಡ್ ಮಾಡಿದಾಗ ಈ ದಾಖಲೆಗಳು ಸಿಕ್ಕಿದ್ದವು. 2009ರಲ್ಲಿ ಬರೆದಿದ್ದೆನ್ನಲಾದ ಶಾಸಕರ ಡೈರಿ ಇದಾಗಿದೆ. ಇದರಲ್ಲಿ ಬಿಜೆಪಿ ಹೈಕಮಾಂಡ್ ನಾಯಕರು ಸೇರಿದಂತೆ ವಿವಿಧ ಜನರಿಗೆ ನೀಡಲಾಗಿದ್ದ ಹಣದ ವಿವರಗಳು ಈ ಡೈರಿಯಲ್ಲಿದ್ದವು. ಈ ಡೈರಿಯಲ್ಲಿದ್ದವು. ಒಟ್ಟು 1,800 ಕೋಟಿ ರುಪಾಯಿ ಹಣವನ್ನು ಕೊಡಲಾಗಿರುವುದನ್ನು ನಮೂದಿಸಲಾಗಿತ್ತು. ಇದರಲ್ಲಿ ಯಡಿಯೂರಪ್ಪನವರ ಸಹಿ ಇದೆ ಎಂದು ಹೇಳಲಾಗಿತ್ತು. 
ಈ ಕುರಿತಂತೆ ಕಾಂಗ್ರೆಸ್ ವಕ್ತಾರ ರಣದೀಪ್ ಸುರ್ಜೆವಾಲ ಸುದ್ದಿಗೋಷ್ಠಿ ಮಾಡಿ ಬಿಜೆಪಿ ವಿರುದ್ಧ ಭ್ರಷ್ಟಾಚಾರದ ಆರೋಪ ಮಾಡಿದ್ದರು. ಇದಕ್ಕೆ ಯಡಿಯೂರಪ್ಪ ಅವರು ಇದೆಲ್ಲಾ ಸುಳ್ಳು ಸುದ್ದಿ ಎಂದು ಆರೋಪವನ್ನು ಸಾರಾಸಗಟಾಗಿ ತಳ್ಳಿಹಾಕಿದ್ದರು. ಇದೇ ವೇಳೆ ಕೇಂದ್ರೀಯ ನೇರ ತೆರಿಗೆ ಮಂಡಳಿ(ಸಿಬಿಡಿಟಿ) ಪ್ರತಿಕ್ರಿಯಿಸಿದ್ದು ಪ್ರಕರಣದಲ್ಲಿ ಸರಿಯಾದ ಸ್ಪಷ್ಟತೆ ಇಲ್ಲ ಎಂದು ಸ್ಪಷ್ಟಪಡಿಸಿದೆ.
ಕಾಂಗ್ರೆಸ್ ಹೇಳುತ್ತಿರುವ ಈ ಡೈರಿಯ ಮೊದಲನೆಯದಾಗಿ ಮೂಲಪ್ರತಿಯಲ್ಲ. ಡಿಕೆಶಿ ಮನೆಯಲ್ಲಿ ಸಿಕ್ಕ ಈ ಡೈರಿ ಎಲ್ಲಿಂದ ಬಂತು. ಇಲ್ಲೆಗ ಹೇಗೆ ಬಂತು ಎಂಬುದು ಗೊತ್ತಾಗಿಲ್ಲ. ಇದರ ಮೂಲ ಪ್ರತಿ ಎಲ್ಲಿದೆ ಎಂಬುದೂ ಗೊತ್ತಿಲ್ಲ. ಡೈರಿಯಲ್ಲಿರುವ ಹಸ್ತಾಕ್ಷತವೂ ಯಡಿಯೂರಪ್ಪನವರದ್ದೇ ಎಂಬುದಕ್ಕೆ ಪುರಾವೆಗಳಿಲ್ಲ. ಮೂಲ ಪ್ರತಿ ಸಿಗದೇ ಈ ಪ್ರಕರಣದಲ್ಲಿ ಏನೂ ಮಾಡಲು ಸಾಧ್ಯವಿಲ್ಲ ಎಂದು ಹೇಳುತ್ತಿದೆ ಐಟಿ ಇಲಾಖೆ. ಹೀಗಾಗಿ ಈ ಪ್ರಕರಣದ ತನಿಖೆ ನೆನೆಗುದಿಯಲ್ಲಿ ಬಿದ್ದಿದೆ.
ಜೀವಂತ ಸಮಾಧಿಯಾಗಿರುವ ಈ ಪ್ರಕರಣವನ್ನು ಕೆದಕುವ ಮೂಲಕ ಕಾಂಗ್ರೆಸ್ ಪಕ್ಷ ತನ್ನ ಪ್ರತಿಷ್ಠೆಗೆ ಧಕ್ಕೆ ಮಾಡಿಕೊಳ್ಳುತ್ತಿದೆಯಾ ಎಂಬ ಅನುಮಾನ ಮೂಡಿದೆ. ಕಾಂಗ್ರೆಸ್ ಪಕ್ಷ ದುರುದ್ದೇಶಪೂರ್ವಕವಾಗಿ ತನ್ನನ್ನು ಗುರಿ ಮಾಡಿ ಸುಳ್ಳು ಕಥೆ ಸೃಷ್ಟಿಸುತ್ತಿದೆ ಎಂದು ಯಡಿಯೂರಪ್ಪ ಈಗಾಗಲೇ ತಿರುಗೇಟು ನೀಡಿದ್ದಾರೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ನಗರ ನಕ್ಸಲರ ಟಾರ್ಗೆಟ್‌ ಚಾಮುಂಡಿ ಬೆಟ್ಟ- ಬಿಎಲ್ ಸಂತೋಷ್: ಸತ್ಯ ಹೇಳಿದರೆ ಕೆಲವರು ಸಹಿಸಲ್ಲ, ಮಾತನಾಡದಿರುವುದೇ ಲೇಸು-dks

ಉಳಿಕೆ ಮತ್ತು ಹೂಡಿಕೆ ನಡುವೆ ಸಮತೋಲನವಿರಲಿ! (ಹಣಕ್ಲಾಸು)

Modi ma*****ch**: ರಾಹುಲ್ ಗಾಂಧಿ Voter Adhikar Yatra ವೇದಿಕೆಯಲ್ಲಿ ಅಶ್ಲೀಲ ನಿಂದನೆ, BJP ಕೆಂಡಾಮಂಡಲ!

Chinnaswamy stampede: 'ನಿಮ್ಮೊಂದಿಗೆ ನಾವಿದ್ದೇವೆ..' 3 ತಿಂಗಳ ಬಳಿಕ ಕೊನೆಗೂ ಮೌನ ಮುರಿದ RCB, ಹೇಳಿದ್ದೇನು?

ಜಮ್ಮುವಿನಲ್ಲಿ 24 ಗಂಟೆಗಳಲ್ಲಿ ದಾಖಲೆಯ 380 ಮಿಮೀ ಮಳೆ!

SCROLL FOR NEXT