ದೇಶ

ಛತ್ತೀಸ್ ಗಢದಲ್ಲಿ ಇದ್ದಾರೆ ನಾಲ್ಕಾರು ನರೇಂದ್ರ ಮೋದಿ, ರಾಹುಲ್ ಗಾಂಧಿ!

Sumana Upadhyaya
ರಾಯ್ ಪುರ: ಹೆಸರಿನಲ್ಲೇನಿದೆ ಎಂದು ಇಂಗ್ಲಿಷ್ ನ ಖ್ಯಾತ ಕವಿ, ನಾಟಕಕಾರ ವಿಲಿಯಮ್ ಷೇಕ್ಸ್ ಪಿಯರ್ ಕೇಳಿದ್ದಾರೆ. ಇನ್ನು ಕನ್ನಡದಲ್ಲಿ ಕವಿ ದಿನಕರ ದೇಸಾಯಿಯವರು ಹೆಸರಿನೊಳೇನಿದೆ? ಅಂದದ ಹೆಸರೆನೆ ಅಷ್ಟಕ್ಕೆ ಮಾರು ಹೋಗುವುದೇ? ಮೊಲ್ಲೆಯ ಹೂವನು ಕಳ್ಳಿಯ ಹೂವೆನೆ ಕಂಪೇನು ಕಡಿಮೆಯಾಗುವುದೇ ಎಂದು ಪ್ರಶ್ನೆ ಮಾಡಿದ್ದಾರೆ.
ಆದರೆ ಹೆಸರಿನಿಂದಲೇ ಎಷ್ಟೊಂದು ಘಟನೆಗಳು ನಡೆದುಹೋದ ಪ್ರಕರಣಗಳು ನಮ್ಮ ಮುಂದಿವೆ. ಲೋಕಸಭೆ ಚುನಾವಣೆಯಲ್ಲಿ ಒಂದೇ ಹೆಸರಿನ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿ ಮತದಾರರಲ್ಲಿ ಗೊಂದಲ ಸೃಷ್ಟಿಸಲು ಮುಂದಾಗಿರುವ ಪ್ರಕರಣಗಳು ಕೂಡ ನಮ್ಮ ಮುಂದಿವೆ.
ಆದರೆ ಕೆಲವರು ದೇಶದ ಖ್ಯಾತ ರಾಜಕೀಯ ನಾಯಕರ ಹೆಸರನ್ನೇ ಹೊಂದಿದ್ದಾರೆ. ಛತ್ತೀಸ್ ಗಢದ ದುರ್ಗಾ ನಗರದಲ್ಲಿ ಮತ್ತು ಬಿಲಾಸ್ಪುರ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹೆಸರಿನ ಮೂವರು ಮತದಾರರಿದ್ದಾರೆ. ಅಲ್ಲದೆ ಇದೇ ರಾಜ್ಯದಲ್ಲಿ ರಾಹುಲ್ ಗಾಂಧಿ ಹೆಸರಿನವರು 6ಕ್ಕೂ ಹೆಚ್ಚು ಮಂದಿ ಇದ್ದಾರೆ.
ಛತ್ತೀಸ್ ಗಢದ ಸಿಎಂ ಭೂಪೇಶ್ ಬಗ್ಹೆಲ್ ಹೆಸರಿನ ಸುಮಾರು 19 ಮಂದಿ ಇದ್ದಾರೆ. ರಾಜ್ಯದ ಮುಖ್ಯಮಂತ್ರಿ ಹೆಸರು ಮತ್ತು ನನ್ನ ಹೆಸರು ಒಂದೇ ರೀತಿ ಇರುವುದರಿಂದ ಜನರು ಕರೆಯುವಾಗ ತಮಾಷೆ ಮಾಡುತ್ತಾರೆ. ಸಿಎಂ ಬಗೆಲ್ ಪಟಣ್ ನಿಂದ ಮತ ಚಲಾಯಿಸಲಿದ್ದಾರೆ.
SCROLL FOR NEXT