ದೇಶ

ಆರ್ಟಿಕಲ್ 370 ರದ್ದುಗೊಂಡರೆ ಭಾರತದೊಂದಿಗಿನ ಸಂಬಂಧ ತೊರೆಯಬೇಕಾಗುತ್ತೆ: ಮೆಹಬೂಬಾ ಮುಫ್ತಿ

Srinivas Rao BV
ಶ್ರೀನಗರ: ಆರ್ಟಿಕಲ್ 370 ಕ್ಕೆ ಸಂಬಂಧಿಸಿದಂತೆ ಜಮ್ಮು-ಕಾಶ್ಮೀರ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ಮತ್ತೊಮ್ಮೆ ಕೇಂದ್ರ ಸರ್ಕಾರವನ್ನು ಎಚ್ಚರಿಸಿದ್ದಾರೆ. 
ಒಂದು ವೇಳೆ ಕೇಂದ್ರ ಸರ್ಕಾರ ಸಂವಿಧಾನದ ಆರ್ಟಿಕಲ್ 370 ನ್ನು ರದ್ದುಗೊಳಿಸಿದರೆ ರಾಜ್ಯದ ಜನತೆ ಭಾರತದೊಂದಿಗಿನ ಸಂಬಂಧದ ಬಗ್ಗೆಯೂ ಯೋಚಿಸುವುದು ಅನಿವಾರ್ಯವಾಗಲಿದೆ ಎಂದು ಹೇಳಿದ್ದಾರೆ. 
ಪಿಡಿಪಿ ಕಾರ್ಯಕರ್ತರನ್ನುದ್ದೇಶಿಸಿ ಮಾತನಾಡಿರುವ ಮೆಹಬೂಬಾ ಮುಫ್ತಿ, ಆರ್ಟಿಕಲ್ 370 ರದ್ದುಗೊಂಡರೆ ಜಮ್ಮು-ಕಾಶ್ಮೀರ ಹಾಗೂ ಭಾರತದ ನಡುವೆ ಬಾಂಧವ್ಯ ಉಳಿಯುವುದಿಲ್ಲ ಎಂದು ಎಚ್ಚರಿಸಿದ್ದಾರೆ. 
ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿರುವ ಆರ್ಟಿಕಲ್ 35 A ಕುರಿತು ಮಾತನಾಡಿದ್ದ ಅರುಣ್ ಜೇಟ್ಲಿ, ಸಂವಿಧಾನದ ಈ ಅಂಶ ಜಮ್ಮು-ಕಾಶ್ಮೀರದ ಅಭಿವೃದ್ಧಿಗೆ ವಿರುದ್ಧವಾಗಿದೆ ಎಂದಿದ್ದರು. ಈ ಬೆನ್ನಲ್ಲೇ ಮೆಹಬೂಬಾ ಮುಫ್ತಿ ಹೇಳಿಕೆ ನೀಡಿದ್ದು, ವಿಶೇಷ ಸ್ಥಾನಮಾನ ನೀಡುವ ಆರ್ಟಿಕಲ್ 35A ರದ್ದುಗೊಂಡರೆ ಜಮ್ಮು-ಕಾಶ್ಮೀರ ಭಾರತವನ್ನು ತೊರೆಯಬೇಕಾಗುವುದರ ಬಗ್ಗೆ ಜನತೆ ಅನಿವಾರ್ಯವಾಗಿ ಚಿಂತಿಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ. 
SCROLL FOR NEXT