ದೇಶದಿಂದ ಓಡಿ ಹೋಗಿರುವೆ ಎನ್ನುತ್ತಿರುವ ಬಿಜೆಪಿ ವಿರುದ್ಧ ಮೊಕದ್ದಮೆ- ವಿಜಯ್ ಮಲ್ಯ
1992 ರಿಂದಲೂ ಇಂಗ್ಲೆಂಡ್ ಪ್ರಜೆಯಾಗಿರುವ ನಿಜಾಂಶವನ್ನು ನಿರ್ಲಕ್ಷಿಸಿ ದೇಶದಿಂದ ಓಡಿ ಹೋಗಿರುವ ಎಂದು ಹೇಳುತ್ತಿರುವ ಬಿಜೆಪಿ ವಿರುದ್ಧ ಮೊಕದ್ದಮೆ ಹೂಡುವುದಾಗಿ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಮದ್ಯ ಉದ್ಯಮಿ ವಿಜಯ್ ಮಲ್ಯ ಹೇಳಿದ್ದಾರೆ.
ನವದೆಹಲಿ: 1992 ರಿಂದಲೂ ಇಂಗ್ಲೆಂಡ್ ಪ್ರಜೆಯಾಗಿರುವ ನಿಜಾಂಶವನ್ನು ನಿರ್ಲಕ್ಷಿಸಿ ದೇಶದಿಂದ ಓಡಿ ಹೋಗಿರುವ ಎಂದು ಹೇಳುತ್ತಿರುವ ಬಿಜೆಪಿ ವಿರುದ್ಧ ಮೊಕದ್ದಮೆ ಹೂಡುವುದಾಗಿ ವಿದೇಶದಲ್ಲಿ ತಲೆ ಮರೆಸಿಕೊಂಡಿರುವ ಮದ್ಯ ಉದ್ಯಮಿ ವಿಜಯ್ ಮಲ್ಯ ಹೇಳಿದ್ದಾರೆ.
1992ರಿಂದಲೂ ಇಂಗ್ಲೆಂಡ್ ಪ್ರಜೆಯಾಗಿದ್ದೇನೆ. ಆದರೂ, ನಿಜಾಂಶವನ್ನು ಮರೆಮಾಚಿ ದೇಶದಿಂದ ಓಡಿ ಹೋಗಿರುವೆ ಎಂದು ಬಿಜೆಪಿ ಹೇಳುತ್ತಿದೆ ಎಂದು ಟ್ವೀಟರ್ ಮೂಲಕ ವಾಗ್ದಾಳಿ ನಡೆಸಿರುವ ವಿಜಯ್ ಮಲ್ಯ, ಬಿಜೆಪಿ ವಿರುದ್ಧ ಮೊಕದ್ದಮೆ ಹಾಕುವುದಾಗಿ ಹೇಳಿದ್ದಾರೆ.