ದೇಶ

'ಮಸೂದ್ ಅಜರ್ ಗೆ ಜಾಗತಿಕ ನಿಷೇಧದ ಯಶಸ್ಸಿನ ಕೀರ್ತಿ ಮೋದಿಗೆ ಸಲ್ಲಬೇಕು'

Srinivas Rao BV
ನವದೆಹಲಿ: ಪುಲ್ವಾಮ ದಾಳಿಯ ಮಾಸ್ಟರ್ ಮೈಂಡ್ ಉಗ್ರ ಮಸೂದ್ ಅಜರ್ ಗೆ ಜಾಗತಿಕ ಮಟ್ಟದಲ್ಲಿ ವಿಶ್ವಸಂಸ್ಥೆ ನಿಷೇಧ ವಿಧಿಸಿದೆ. ಈ ಯಶಸ್ಸಿನ ಕೀರ್ತಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸಲ್ಲಬೇಕೆಂದು ಬಿಜೆಪಿ ಹೇಳಿದೆ. 
ಪ್ರಧಾನಿ ನರೇಂದ್ರ ಮೋದಿ ಕೈಲಿ ಭಾರತ ಸುರಕ್ಷಿತವಾಗಿದೆ.  ಭಾರತಕ್ಕೆ ಯಶಸ್ಸು ಗಳಿಸಿದೆ. ಮಸೂದ್ ಅಜರ್ ಈಗ ಜಾಗತಿಕ ಮಟ್ಟದ ಭಯೋತ್ಪಾದಕ, ಭಾರತ ಸುರಕ್ಷಿತವಾದ ಕೈಗಳಲ್ಲಿದೆ. ಮಸೂದ್ ಅಜರ್ ಗೆ ನಿಷೇಧ ವಿಧಿಸಿರುವುದು ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಾಂಗ ನೀತಿಗೆ ಮತ್ತೊಂದು ಜಯ ಸಂದಿದೆ ಎಂದು ವಿತ್ತ ಸಚಿವ ಅರುಣ್ ಜೇಟ್ಲಿ ಹೇಳಿದ್ದಾರೆ. 
ಮಸೂದ್ ಅಜರ್ ಗೆ ಜಾಗತಿಕ ನಿಷೇಧ ವಿಧಿಸಿರುವುದನ್ನು ಬಿಜೆಪಿ ಲೋಕಸಭಾ ಚುನಾವಣೆಯ ತನ್ನ ಘೋಷ ವಾಕ್ಯ  ಮೋದಿ ಹೈ ತೋ ಮುಮ್ಕಿನ್ ಹೈ (ಮೋದಿ ಇದ್ದರೆ ಎಲ್ಲವೂ ಸಾಧ್ಯ) ಗೆ ಬಳಸಿಕೊಂಡಿದೆ.
SCROLL FOR NEXT