ಗಡ್ಚಿರೋಲಿ: ಮಹಾರಾಷ್ಟ್ರ ದಿವಸದಂದೇ ರಾಜ್ಯದಲ್ಲಿ ನಕ್ಸಲರು ಅಟ್ಟಹಾಸ ಮೆರೆದಿದ್ದು, ಕುರ್ಖೇಡಾ ಉಪ ಜಿಲ್ಲೆಯಲ್ಲಿ ಖಾಸಗಿ ಗುತ್ತಿಗೆದಾರರೊಬ್ಬರಿಗೆ ಸೇರಿದ್ದ ಸುಮಾರು 27ಕ್ಕೂ ಹೆಚ್ಚು ವಾಹನಗಳಿಗೆ ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾರೆ.
ಘಟನೆಯಲ್ಲಿ ಎರಡು ಜೆಸಿಬಿ, 11 ಟಿಪ್ಪರ್, ಡೀಸೆಲ್ ಮತ್ತು ಪೆಟ್ರೋಲ್ ಟ್ಯಾಂಕರ್ಸ್, ರೋಡ್ ರೋಲರ್ಸ್, ಜೆನರೆಟರ್ ವ್ಯಾನ್‌ಗಳು ಸುಟ್ಟು ಕರಕಲಾಗಿವೆ.
ಬೆಂಕಿಗಾಹುತಿಯಾಗಿರುವ ಬಹುತೇಕ ವಾಹನಗಳು ಅಮರ್ ಇನ್ಫ್ರಾಸ್ಟ್ರಕ್ಟರ್ ಲಿಮಿಟೆಡ್‌ಗೆ ಸೇರಿದ್ದು, ದಾದಾಪುರ ಗ್ರಾಮದ ಸಮೀಪದಲ್ಲಿರುವ ಎನ್‌ಎಚ್ 136 ಬಳಿಯ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದವು ಎಂದು ತಿಳಿದು ಬಂದಿದೆ.
ಕಳೆದ ವರ್ಷ ನಡೆದ ತಮ್ಮ ಕಮಾಂಡರ್‌ಗಳ ಹತ್ಯೆಗೆ ಪ್ರತೀಕಾರವಾಗಿ ನಕ್ಸಲರು ಈ ಕೃತ್ಯ ಎಸಗಿದ್ದಾರೆ ಎನ್ನಲಾಗಿದ್ದು, ವಾಹನಗಳಿಗೆ ಬೆಂಕಿ ಇಡುವ ಮುನ್ನ ನಗರದಲ್ಲಿ ಬ್ಯಾನ್‌ರ್ ಹಾಗೂ ಪೋಸ್ಟರ್‌ಗಳನ್ನು ಹಾಕಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics