ದೇಶ

ಬಿಜೆಪಿಯ 5 ವರ್ಷದ ಆಡಳಿತ ಕೇವಲ ಟ್ರೇಲರ್ ಮಾತ್ರ, ರಿಯಲ್ ಸಿನಿಮಾ ಬಾಕಿಯಿದೆ: ನಿತಿನ್ ಗಡ್ಕರಿ

Shilpa D
ನವದೆಹಲಿ: ಭಾರತೀಯ ಜನತಾ ಪಕ್ಷದ ಐದು ವರ್ಷದ ಆಡಳಿತ ಕೇವಲ ಟ್ರೇಲರ್ ಮಾತ್ರ, ನಿಜವಾದ ಸಿನಿಮಾ ಇನ್ನೂ ಬಾಕಿಯಿದೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ,.
ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಗಡ್ಕರಿ, ಕಾಂಗ್ರೆಸ್ ಒಂದು ಗೊಂದಲಮಯ ಪಕ್ಷ,  ಕಾಂಗ್ರೆಸ್ ನಿಂದ ಭಾರತದ ಭವಿಷ್ಯ ಬದಲಾಯಿಸಲು ಸಾಧ್ಯವಿಲ್ಲ, ಕೇವಲ ಬಿಜೆಪಿ ಮಾತ್ರ ದೇಶವನ್ನು ಅಭಿವೃದ್ಧಿಯ ಪಥದತ್ತ ಕರೆದೊಯ್ಯುತ್ತದೆ ಎಂದು ಹೇಳಿದ್ದಾರೆ.
ಕಾಂಗ್ರೆಸ್ ಮತ್ತು ಅದರ ಅಂಗ ಪಕ್ಷಗಳು  ಬಿಜೆಪಿಯನ್ನು ಸೋಲಿಸಲು ಒಗ್ಗಟ್ಟಾಗಿವೆ, ಸ್ವಾತಂತ್ರ್ಯ ನಂತರದಲ್ಲಿ ಸಂಸತ್ತಿನಲ್ಲಿ ಕಾಂಗ್ರೆಸ್ ಅತಿ ಕೆಟ್ಟದ್ದಾಗಿದೆ,. ಕಾಂಗ್ರೆಸ್ ಅತಿ ಕೆಟ್ಟ ಪರಿಸ್ಥಿತಿಯಲ್ಲಿದೆ, ವಿರೋಧ ಪಕ್ಷದ ನಾಯಕರಾಗಿ ಕೆಲಸ ಮಾಡಲು ಕಾಂಗ್ರೆಸ್ ನಿಂದ ಸಾಧ್ಯವಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ. 
SCROLL FOR NEXT