ದೇಶ

ಕೇಜ್ರಿವಾಲ್ ಕಪಾಳಕ್ಕೆ ಹೊಡೆದಿದ್ದು ಬಿಜೆಪಿ ಕಾರ್ಯಕರ್ತನಲ್ಲ, ಆಪ್ ಕಾರ್ಯಕರ್ತ: ದೆಹಲಿ ಪೊಲೀಸ್

Vishwanath S
ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ಕಾರ್ಯಕರ್ತನೊಬ್ಬ ಕಪಾಳಮೋಕ್ಷ ಮಾಡಿದ್ದು ಈ ಸಂಬಂಧ ಎಎಪಿ ನಾಯಕರು ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಗೂಬೆ ಕೂರಿಸಲು ಮುಂದಾಗಿದ್ದರು. ಆದರೆ ಇದೀಗ ದೆಹಲಿ ಪೊಲೀಸರು ಕೇಜ್ರಿವಾಲ್ ಕಪಾಳಕ್ಕೆ ಬಾರಿಸಿದ್ದು ಬಿಜೆಪಿ ಕಾರ್ಯಕರ್ತನಲ್ಲ ಬದಲಿಗೆ ಅಸಮಾದಾನಿತ ಎಎಪಿ ಕಾರ್ಯಕರ್ತ ಎಂದು ತಿಳಿಸಿದ್ದಾರೆ.
ನಿನ್ನೆ ನಡೆದ ರ್ಯಾಲಿ ಸಂದರ್ಭದಲ್ಲಿ ಕೇಜ್ರಿವಾಲ್ ಅವರ ಕಪಾಳಕ್ಕೆ ಕಾರ್ಯಕರ್ತನೊಬ್ಬ ಬಾರಿಸಿದ್ದ. ಇದಾದ ನಂತರ ಆತನನ್ನು ವಶಕ್ಕೆ ಪಡೆದ ಪೊಲೀಸರು ವಿಚಾರಣೆ ನಡೆಸಿದ್ದರು. ಈ ವೇಳೆ ಆತ ಸುರೇಶ್ ಮೋತಿ ನಗರ್ ನಿವಾಸಿ ಎಂದು ತಿಳಿದಿದೆ. ಇನ್ನು ಸುರೇಶ್ ತನ್ನ ವ್ಯಾಪ್ತಿಯ ಪ್ರದೇಶದಲ್ಲಿ ಎಎಪಿ ಪಕ್ಷದ ಜವಾಬ್ದಾರಿ ವಹಿಸಿಕೊಂಡಿದ್ದು ಪಕ್ಷದ ಸಭೆಗಳನ್ನು ಆಯೋಜಿಸುತ್ತಿದ್ದ. ಆದರೆ ಪಕ್ಷದ ನಾಯಕರ ನಡೆ ಹಾಗೂ ವರ್ತನೆಯಿಂದ ಬೇಸತ್ತಿದ್ದ ಸುರೇಶ್ ಅಸಮಾಧಾನಗೊಂಡು ಕೃತ್ಯ ಎಸಗಿದ್ದಾನೆ ಎಂದು ದೆಹಲಿ ಪೊಲೀಸ್ ಹೆಚ್ಚುವರಿ ಪಿಆರ್ಒ ಅನಿಲ್ ಮಿಟ್ಟಲ್ ತಿಳಿಸಿದ್ದಾರೆ.
ಭಾರತೀಯ ಸೇನೆಯ ಬಗ್ಗೆ ಎಎಪಿ ಪಕ್ಷದ ನಾಯಕರು ಅವಹೇಳಕಾರಿಯಾಗಿ ಹೇಳಿಕೆ ನೀಡಿದ್ದರು. ಇದರಿಂದ ಸುರೇಶ್ ಆಕ್ರೋಶಿತನಾಗಿದ್ದ. ಹೀಗಾಗಿ ಕೇಜ್ರಿವಾಲ್ ಗೆ ಕಪಾಳಮೋಕ್ಷ ಮಾಡಿದ್ದಾನೆ ಎಂದು ತಿಳಿದುಬಂದಿದೆ.
SCROLL FOR NEXT