ಸಾಂದರ್ಭಿಕ ಚಿತ್ರ 
ದೇಶ

ಐಸಿಎಸ್ಇ 10, 12ನೇ ತರಗತಿ ಫಲಿತಾಂಶ ಪ್ರಕಟ, ಬೆಂಗಳೂರಿನ ವಿಭಾ ದೇಶಕ್ಕೆ ಪ್ರಥಮ

ಭಾರತೀಯ ಪ್ರೌಢ ಶಿಕ್ಷಣ ಪ್ರಮಾಣಪತ್ರ(ಐಸಿಎಸ್‌ಇ) 10ನೇ ತರಗತಿ ಹಾಗೂ 12ನೇ ತರಗತಿಯ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು,.....

ನವದೆಹಲಿ: ಭಾರತೀಯ ಪ್ರೌಢ ಶಿಕ್ಷಣ ಪ್ರಮಾಣಪತ್ರ(ಐಸಿಎಸ್‌ಇ) 10ನೇ ತರಗತಿ ಹಾಗೂ 12ನೇ ತರಗತಿಯ ಫಲಿತಾಂಶ ಮಂಗಳವಾರ ಪ್ರಕಟವಾಗಿದ್ದು, ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.
12ನೇ ತರಗತಿಯ ಐಎಸ್‌ಸಿ ಪರೀಕ್ಷೆಯಲ್ಲಿ ಇದೇ ಮೊದಲ ಬಾರಿಗೆ ಇಬ್ಬರು ವಿದ್ಯಾರ್ಥಿಗಳು ಶೇ.100 ರಷ್ಟು ಅಂಕ ಪಡೆದಿದ್ದು, ಬೆಂಗಳೂರಿನ ವಿಭಾ ಸ್ವಾಮಿನಾಥನ್‌(ಹ್ಯೂಮಾನಿಟೀಸ್‌ ವಿಭಾಗದಲ್ಲಿ) 12ನೇ ತರಗತಿಯ ಐಎಸ್‌ಸಿ ಪರೀಕ್ಷೆಯಲ್ಲಿ ಶೇ. 100 ರಷ್ಟು ಫಲಿತಾಂಶ ಪಡೆದುಕೊಂಡು ದೇಶದಲ್ಲೇ ಪ್ರಥಮ ರ‍್ಯಾಂಕ್ ಗಳಿಸಿದ್ದಾರೆ. ಇಂಗ್ಲಿಷ್‌ ಹಾಗೂ ಇತರೆ ಮೂರು ಆಯ್ದ ಉತ್ತಮ ವಿಷಯಗಳಲ್ಲಿ ಈಕೆ 400 ಕ್ಕೆ 400 ಅಂಕಗಳಿಸಿ ಶೇ. 100ರಷ್ಟು ಅಂಕಗಳಿಸಿದ್ದಾಳೆ. ವಿಭಾ ಬೆಂಗಳೂರಿನ ಮಲ್ಯ ಅದಿತಿ ಶಾಲೆಯ ವಿದ್ಯಾರ್ಥಿನಿ.
ಇನ್ನು ವಿಜ್ಞಾನ ವಿಭಾಗದಲ್ಲಿ ಕೋಲ್ಕತದ ದೇವಾಂಗ್‌ ಕುಮಾರ್‌ ಅಗರ್ವಾಲ್‌ ಸಹ ಶೇ. 100ರಷ್ಟು ಅಂಕ ಗಳಿಸಿದ್ದು,  ಅಗ್ರ ಸ್ಥಾನವನ್ನು ಹಂಚಿಕೊಂಡಿದ್ದಾರೆ.
ಐಸಿಎಸ್‌ಇ 10ನೇ ತರಗತಿ ಪರೀಕ್ಷೆಯಲ್ಲಿ ಬೆಂಗಳೂರಿನ ವಾಣಿ ಪಬ್ಲಿಕ್‌ ಶಾಲೆಯ ವಿ.ಸಾಧನಾ ಶೇ. 99.20 ರಷ್ಟು ಅಂಕಗಳಿಸಿದ ಸಾಧನೆ ಮಾಡಿದ್ದು, ದೇಶದಲ್ಲಿ ಮೂರನೇ ಸ್ಥಾನ ಹಾಗೂ ಕರ್ನಾಟಕ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ್ದಾಳೆ. 
ರಾಜ್ಯದ ಐವರು ಟಾಪರ್‌ಗಳ ವಿವರ
1. ವಿ.ಸಾಧನಾ - ಶೇ. 99.20 
2. ನಿತಿನ್ ಅರವಿಂದ್ ಬೀರೂರು - ಶೇ. 99.00 
3.ಅನಘ ಎಚ್‌.ಸಿ - ಶೇ. 99.00 
4.ಸಾನಾ ದತ್ - ಶೇ. 99.00 
5.ನಿತ್ಯ ಅಗರ್ವಾಲಾ - ಶೇ. 99.00 
ಐಸಿಎಸ್‌ಇ ಪರೀಕ್ಷೆಯಲ್ಲಿ ರಾಜ್ಯದ 18,217 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದು, ಈ ಪೈಕಿ ಶೇ. 99.77 ರಷ್ಟು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ. ಇಲ್ಲೂ ಬಾಲಕಿಯರೇ ಮೇಲುಗೈ ಸಾಧಿಸಿದ್ದು, ಶೇ. 99.89 ರಷ್ಟು ವಿದ್ಯಾರ್ಥಿನಿಯರು ತೇರ್ಗಡೆ ಹೊಂದಿದ್ದರೆ, ಬಾಲಕರು ಶೇ. 99.65 ರಷ್ಟು ತೇರ್ಗಡೆ ಹೊಂದಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

'ನನ್ನ ವಿರುದ್ಧ 100 ಎಫ್‌ಐಆರ್‌ ದಾಖಲಿಸಿ ಹೆದರಲ್ಲ, ಪ್ರತಿಯೊಂದೂ ನನಗೆ ಪದಕ': ರಾಹುಲ್ ಗಾಂಧಿ

CM ಆಗಲು ಸಿದ್ದರಾಮಯ್ಯ ವಿರುದ್ಧ ಡಿಕೆಶಿ ಸ್ಟಿಂಗ್ ಆಪರೇಷನ್; ಈಗ ಸಚಿವರ ವಿರುದ್ಧವೂ ಅದೇ ತಂತ್ರ: ಕುಮಾರಸ್ವಾಮಿ ಗಂಭೀರ ಆರೋಪ

ಹೆನ್ರಿ ಕಗನ್, ಕೆನ್ಸೊ ಸೊವೈಗೆ 2026ರ ರಸಾಯನಶಾಸ್ತ್ರದ ನೊಬೆಲ್ ಪ್ರಶಸ್ತಿ

'ನಾನು ಕ್ಯಾಬ್‌ನಲ್ಲಿ ಓಡಾಡೋ ಹುಡುಗಿ ಕಣ್ರೋ.. ಹೋಗ್ಲಿ ಪಾಪ ಅಂತಾ ಬಸ್`ನಲ್ಲಿ ಬಂದೆ': MTC ಬಸ್‌ನಲ್ಲಿ ಕುಡಿದ ಮತ್ತಿನಲ್ಲಿ ಯುವತಿ ರಂಪಾಟ, Video ವೈರಲ್

ಅಮೆರಿಕ ಸೇನೆಯ ಮಾಜಿ ಮೇಜರ್‌ಗೆ ಶೂಟ್ ಮಾಡುವ ಮೂಲಕ ಮರಣದಂಡನೆ ಶಿಕ್ಷೆ: 65 ವರ್ಷಗಳಲ್ಲಿ ಇದೇ ಮೊದಲು!