ನವದೆಹಲಿ: ಪಾಕಿಸ್ತಾನ ನಿರಂತರವಾಗಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿದೆ. ಒಂದು ವೇಳೆ ಇದನ್ನು ನಿಲ್ಲಿಸದಿದ್ದರೆ ಆ ರಾಷ್ಟ್ರಕ್ಕೆ ಭಾರತದಿಂದ ಹರದುಹೋಗಲಿರುವ ನೀರನ್ನು ನಿಲ್ಲಿಸದೆ ಅನ್ಯ ಮಾರ್ಗವಿಲ್ಲ ಎಂದು ಜಲಸಂಪನ್ಮೂಲ ಸಚಿವ ನಿತಿನ್ ಗಡ್ಕರಿ ಎಚ್ಚರಿಕೆ ನೀಡಿದ್ದಾರೆ.
ಈ ನಿಟ್ಟಿನಲ್ಲಿ ಆಂತರಿಕ ಅಧ್ಯಯನ ಪ್ರಾರಂಭಿಸಲಾಗಿದೆ. ಪಾಕಿಸ್ತಾನಕ್ಕೆ ಹೋಗುವ ನೀರನ್ನು ಹರಿಯಾಣ, ಪಂಜಾಬ್ ಹಾಗೂ ರಾಜಸ್ತಾನಕ್ಕೆ ಹೋಗುವಂತೆ ಮಾಡಲಾಗುವುದು ಎಂದಿದ್ದಾರೆ.
ಭಾರತದ ಮೂರು ನದಿಗಳಿಂದ ಪಾಕಿಸ್ತಾನಕ್ಕೆ ನೀರು ಹೋಗುತ್ತಿದೆ. ಆ ನೀರನ್ನು ತಡೆಗಟ್ಟಿಲ್ಲ. ಆದರೆ, ಭಾರತ ಮತ್ತು ಪಾಕಿಸ್ತಾನ ನಡುವಣ ನೀರು ಒಪ್ಪಂದ ಆಧಾರದ ಮೇಲಿನ ಶಾಂತಿಯುತ ಸಂಬಂಧ ಹಾಗೂ ಸಹಕಾರ ಸಂಪೂರ್ಣ ಹಾಳಾಗಿದೆ. ಆದ್ದರಿಂದ ಈ ಒಪ್ಪಂದವನ್ನು ಅನುಸರಿಸಲು ನಾವು ಬದ್ಧರಾಗಿಲ್ಲ ಎಂದು ನಿತಿನ್ ಗಡ್ಕರಿ ಹೇಳಿದ್ದಾರೆ.