ನವದೆಹಲಿ: ಅಮೆರಿಕದ ಟೈಮ್ ನಿಯತಕಾಲಿಕೆ ತನ್ನ ಅಂತಾರಾಷ್ಟ್ರೀಯ ಆವೃತ್ತಿಯ ಮುಖಪುಟದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಫೋಟೋ ಪ್ರಕಟಿಸಿ, ಅದಕ್ಕೆ 'ಇಂಡಿಯಾಸ್ ಡಿವೈಡರ್ ಇನ್ ಚೀಫ್'(ಭಾರತದ ಮುಖ್ಯ ವಿಭಜಕ) ಎಂಬ ಶೀರ್ಷಿಕೆ ನೀಡಿದೆ.
ಟೈಮ್ ಮ್ಯಾಗಜಿನ್ ನ 20 ರ ಸಂಚಿಕೆಯಲ್ಲಿ ಈ ವಿವಾದಾತ್ಮಕ ಶೀರ್ಷಿಕೆ ನೀಡಲಾಗಿದ್ದು, ಉಪ ಶೀರ್ಷಿಕೆಯಲ್ಲಿ “ಮೋದಿ ದ ರಿಫಾರ್ಮರ್’ಎಂಬ ಸಾಲನ್ನು ಕೂಡ ಪ್ರಕಟಿಸಿದೆ.
ಪತ್ರಕರ್ತ ಆತೀಶ್ ತಸೀರ್ ಅವರು ಪ್ರಧಾನಿ ಮೋದಿ ಕುರಿತ ಈ ಲೇಖನ ಬರೆದಿದ್ದು, ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತ, ಇನ್ನು ಐದು ವರ್ಷಗಳ ಕಾಲ ಮೋದಿ ಸರ್ಕಾರವನ್ನು ತಾಳಿಕೊಳ್ಳಲಿದೆಯೇ? ಎಂಬ ಪ್ರಶ್ನೆಯನ್ನು ಮುಂದಿಟ್ಟಿದ್ದಾರೆ.
ಜನಪ್ರಿಯತೆಗೆ ಬಲಿ ಬಿದ್ದ ದೊಡ್ಡ ಪ್ರಜಾಪ್ರಭುತ್ವ ದೇಶಗಳಲ್ಲಿ ಭಾರತ ಮೊದಲ ದೇಶವಾಗಿದ್ದು, ಮೋದಿಯ ಆಡಳಿತದಲ್ಲಿ ದೇಶದ ಮೂಲಭೂತ ತತ್ವಗಳು, ಅದರ ಸ್ಥಾಪಕರು, ಅಲ್ಪ ಸಂಖ್ಯಾತರ ಸ್ಥಾನಮಾನಗಳು, ವಿಶ್ವವಿದ್ಯಾಲಯಗಳಿಂದ ಹಿಡಿದು ಕಾರ್ಪೋರೇಟ್ ಸಂಸ್ಥೆಗಳು ಹಾಗೂ ಮಾಧ್ಯಮ ಸಂಸ್ಥೆಗಳ ತನಕ ಎಲ್ಲಾ ಸಂಸ್ಥೆಗಳ ಬಗ್ಗೆ ಅಪನಂಬಿಕೆ ಹುಟ್ಟಿಸಲಾಗಿದೆ ಎಂದು ಲೇಖನದಲ್ಲಿ ಬರೆಯಲಾಗಿದೆ.
ಪ್ರತಿಪಕ್ಷ ಕಾಂಗ್ರೆಸ್ ಗೆ ವಂಶಾಡಳಿತೆಯ ತತ್ವಗಳನ್ನು ನೆಚ್ಚಿಕೊಂಡಿದ್ದು, ದರ್ಬಲ ಪ್ರತಿಪಕ್ಷಗಳು ಮೋದಿ ಪಾಲಿಗೆ ವರದಾನವಾಗಿದೆ. 2014ರಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸಲು ವಿಫಲವಾದ ರಾಜಕಾರಣಿಯೇ ಈಗ ಮರು ಆಯ್ಕೆ ಬಯಸಿದ್ದಾರೆ ಎಂದು ಬರೆಯಲಾಗಿದೆ.
ಮೋದಿ ನೇತೃತ್ವದ ಬಿಜೆಪಿ ಉದ್ದೇಶಪೂರ್ವಕವಾಗಿ ಹಿಂದೂ ಮತ್ತು ಮುಸ್ಲಿಮರನ್ನು ವಿಭಜನೆ ಮಾಡುತ್ತಿದೆ. ಮೋದಿಯ ವಿಜಯವು ಅಪನಂಬಿಕೆಯ ಭಾವಾಭಿವ್ಯಕ್ತಿ. ನೆಹರೂ ಅವರ ಜಾತ್ಯತೀತತೆ, ಸಮಾಜವಾದದ ಮೇಲೆ ದಾಳಿ ನಡೆಸಲಾಗಿದೆ. ಮೋದಿ "ಕಾಂಗ್ರೆಸ್ ಮುಕ್ತ" ಭಾರತದ ಬಗ್ಗೆ ಮಾತನಾಡುತ್ತಾರೆ. ಹಿಂದೂ-ಮುಸ್ಲಿಮರ ಮಧ್ಯೆ ಸೋದರತ್ವ ಬೆಳೆಸುವ ಯಾವ ಇಚ್ಛೆಯನ್ನು ಅವರು ವ್ಯಕ್ತಪಡಿಸಿಲ್ಲ ಟೈಮ್ ಮ್ಯಾಗಜಿನ್ ಟೀಕಿಸಿದೆ.
Follow KannadaPrabha channel on WhatsApp
Download the KannadaPrabha News app to follow the latest news updates
Subscribe and Receive exclusive content and updates on your favorite topics
Subscribe to KannadaPrabha YouTube Channel and watch Videos