ದೇಶ

1984ರ ಸಿಖ್ ನರಮೇಧ ಕುರಿತು ಸ್ಯಾಮ್​ ಪಿತ್ರೊಡಾ ಹೇಳಿಕೆ ಖಂಡಿಸಿದ ರಾಹುಲ್ ಗಾಂಧಿ

Shilpa D
ನವದೆಹಲಿ: ಮಾಜಿ ಪ್ರಧಾನಿ ಇಂದಿರಾಗಾಂಧಿ ಅವರ ಹತ್ಯೆಯ ಬಳಿಕ 1984ರಲ್ಲಿ ನಡೆದ ಸಿಖ್​ನರೆಮೇಧ ಆಗಿದ್ದು ಆಗಿಹೋಯಿತು ಎಂದು ಕಾಂಗ್ರೆಸ್​ಮುಖಂಡ ಸ್ಯಾಮ್​ಪಿತ್ರೊಡಾ ನೀಡಿರುವ ಹೇಳಿಕೆಗೆ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆಕ್ಷೇಪ ವ್ಯಕ್ತ ಪಡಿಸಿದ್ದಾರೆ.
ಪಿತ್ರೊಡಾ ಅವರ ಹೇಳಿಕೆ ಅತ್ಯಂತ ಬೇಜವಾಬ್ದಾರಿತನದ್ದಾಗಿದೆ. ಆದ್ದರಿಂದ ಅವರು ಕೂಡಲೆ ದೇಶದ ಜನತೆಯ ಕ್ಷಮೆಯಾಚಿಸುವುದು ಒಳಿತು ಎಂದು ರಾಹುಲ್ ಸೂಚಿಸಿದ್ದಾರೆ.
ತಮ್ಮ ಅಜ್ಜಿ ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ತಮ್ಮ ಬೆಂಗಾವಲು ಪಡೆಯ ಇಬ್ಬರು ಸಿಬ್ಬಂದಿಯ ಗುಂಡಿಗೆ ಬಲಿಯಾದ ಬಳಿಕ 1984ರ ಅಕ್ಟೋಬರ್​ 31ರಂದು ನಡೆದ ಸಿಖ್​ ನರಮೇಧ ಅತ್ಯಂತ ದುಃಖದಾಯಕ ಘಟನೆ ಎಂದು ಬಣ್ಣಿಸಿದ್ದಾರೆ.
SCROLL FOR NEXT