ದೇಶ

ಸಾರ್ವಜನಿಕ ಜೀವನದಲ್ಲಿರಲು ನಾಲಾಯಕ್: ಮೋದಿ ವೈಯಕ್ತಿಕ ವಿಷಯ ಟೀಕಿಸಿದ್ದ ಮಾಯಾವತಿಗೆ ಜೇಟ್ಲಿ

Srinivas Rao BV
ರಾಜಕೀಯ ಲಾಭಕ್ಕಾಗಿ ಮೋದಿ ತಮ್ಮ ಪತ್ನಿಯನ್ನು ತೊರೆದಿದ್ದಾರೆ ಎಂಬ ಬಿಎಸ್ ಪಿ ನಾಯಕಿ ಮಾಯಾವತಿ ಹೇಳಿಕೆಗೆ ಕೇಂದ್ರ ವಿತ್ತ ಸಚಿವ ಅರುಣ್ ಜೇಟ್ಲಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. 
ಮಾಯಾವತಿ ಅವರ ಹೇಳಿಕೆ ರಾಜಕೀಯ ಭಾಷಣವನ್ನು ಅಧಃಪತನಕ್ಕಿಳಿಸಿದೆ ಎಂದು ಅರುಣ್ ಜೇಟ್ಲಿ ಹೇಳಿದ್ದು, ಸಹೋದರಿ ಮಾಯಾವತಿ- ಅವರು ಪ್ರಧಾನಿಯಾಗುವುದಕ್ಕೆ ಬಯಸುತ್ತಿದ್ದಾರೆ. ಅವರ ಆಡಳಿತ, ನೀತಿ, ರಾಜಕೀಯ ಮಾತುಗಾರಿಕೆ ಎಲ್ಲವೂ ಸಾರ್ವಕಾಲಿಕ ಅಧಃಪತನಕ್ಕಿಳಿದಿದೆ. ಮಾಯಾವತಿ ಇಂದು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ನಡೆಸಿದ ವೈಯಕ್ತಿಕ ಟೀಕೆ ಅವರು ಸಾರ್ವಜನಿಕ ಜೀವನದಲ್ಲಿರುವುದಕ್ಕೇ ನಾಲಾಯಕ್ ಎಂಬುದನ್ನು ಬಹಿರಂಗಪಡಿಸಿದೆ ಎಂದು ಜೇಟ್ಲಿ ಟ್ವೀಟ್ ಮಾಡಿದ್ದಾರೆ. 
 ಸುದ್ದಿಸಂಸ್ಥೆಯೊಂದಕ್ಕೆ ಸಂದರ್ಶನ ನೀಡಿದ್ದ ಮಾಯಾವತಿ  ಅಲ್ವರ್ ಅತ್ಯಾಚಾರ ಕೇಸಿನಲ್ಲಿ ಮೋದಿಯವರು ರಾಜಕೀಯ ಮಾಡುತ್ತಿದ್ದಾರೆ. ಮದುವೆಯಾದ ಮಹಿಳೆಯರು ತಮ್ಮ ಪತಿಯನ್ನು ನರೇಂದ್ರ ಮೋದಿಯವರ ಬಳಿ ಕಳುಹಿಸಲು ಭಯಪಡುತ್ತಾರೆ. ಮೋದಿಯವರು ತಮ್ಮ ಪತ್ನಿಯನ್ನು ತೊರೆದಂತೆ ತಮ್ಮ ಪತಿಯಂದಿರೂ ಕೂಡ ತಮ್ಮನ್ನು ಬಿಟ್ಟು ಹೋದರೆ ಎಂಬ ಭಯ ಅವರಿಗೆ ಎಂದು ವ್ಯಂಗ್ಯವಾಡಿದ್ದರು.
SCROLL FOR NEXT