ದೇಶ

ಮಧ್ಯ ಪ್ರದೇಶ: ಪತ್ನಿ ಖಾಸಗಿ ಭಾಗಕ್ಕೆ ಪ್ಲಾಸ್ಟಿಕ್ ಹ್ಯಾಂಡಲ್ ಗ್ರಿಪ್ ಇಟ್ಟ ಪತಿ ಬಂಧನ

Lingaraj Badiger
ಇಂದೋರ್: ಸುಮಾರು ಎರಡು ವರ್ಷಗಳ ಹಿಂದೆ ತನ್ನ ಪತ್ನಿ ಖಾಸಗಿ ಭಾಗದಲ್ಲಿ ಬೈಕ್ ನ ಪ್ಲಾಸ್ಟಿಕ್ ಹ್ಯಾಂಡಲ್ ಗ್ರಿಪ್ ಇಟ್ಟಿದ್ದ ಪತಿ ಮಹಾಶಯನನ್ನು ಮಧ್ಯ ಪ್ರದೇಶದ ಇಂದೋರ್ ಪೊಲೀಸರು ಬಂಧಿಸಿದ್ದಾರೆ.
30 ವರ್ಷದ ಮಹಿಳೆಯ ಗರ್ಭಕೋಶದಲ್ಲಿದ್ದ ಪ್ಲಾಸ್ಟಿಕ್ ಹ್ಯಾಂಡಲ್ ಅನ್ನು ತೆಗೆಯಲು ನಿನ್ನೆ ಸುಮಾರು 4 ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ. ಶಸ್ತ್ರ ಚಿಕಿತ್ಸೆ ಮಾಡಿ ಪ್ಲಾಸ್ಟಿಕ್ ಹ್ಯಾಂಡಲ್ ಗ್ರಿಪ್ ಹೊರ ತೆಗೆಯದಿದ್ದರೆ ಮಹಿಳೆಯ ದೆಹದ ಇತರೆ ಭಾಗಗಳಿಗೂ ಸೋಂಕು ಹರಡುವ ಸಾಧ್ಯತೆ ಇತ್ತು ಎಂದು ಮಹಾರಾಜ ಯಶ್ವಂತರಾವ್ ಸರ್ಕಾರಿ ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.
ಮಹಿಳೆ ಪತಿ ಪ್ರಕಾಶ್ ಭಿಲ್ ಅಲಿಯಾಸ್ ರಾಮಾ(35) ಎರಡು ವರ್ಷಗಳ ಹಿಂದೆ, ತಾನು ಇತರೆ ಮಹಿಳೆಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದನ್ನು ಪ್ರಶ್ನಿಸಿದ್ದ ಪತ್ನಿಯೊಂದಿಗೆ ಜಗಳ ಮಾಡಿ, ಬಳಿಕ ಆಕೆಯ ಗರ್ಭಕೋಶಕ್ಕೆ ಬಲವಂತವಾಗಿ ಪ್ಲಾಸ್ಟಿಕ್ ಹ್ಯಾಂಡಲ್ ಗ್ರಿಪ್ ಇಟ್ಟಿದ್ದ. ಆದರೆ ಮಹಿಳೆ ತನ್ನ ಗರ್ಭಕೋಶದಲ್ಲಿ ನೋವು ಕಾಣಿಸಿಕೊಳ್ಳುವವರೆಗೆ ಯಾರಿಗೂ ಹೇಳಿರಲಿಲ್ಲ ಎಂದು ಚಂದನ ನಗರ ಪೊಲೀಸ್ ಠಾಣೆಯ ಅಧಿಕಾರಿ ರಾಹುಲ್ ಶರ್ಮಾ ಅವರು ತಿಳಿಸಿದ್ದಾರೆ.
ಮಹಿಳೆ ನೀಡಿದ ದೂರಿನ ಆಧಾರದ ಮೇಲೆ ಪತಿ ರಾಮಾನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
SCROLL FOR NEXT