ದೇಶ

ಅಹಮದಾಬಾದ್: ಬಿಸಿಲ ಬೇಗೆಯಿಂದ ಕಾರನ್ನು ತಂಪಾಗಿಸಲು ಮಹಿಳೆ ಮಾಡಿದ ಉಪಾಯವೇನು ಗೊತ್ತೆ?

Shilpa D
ಅಹಮದಾಬಾದ್: ಕಾರಿನೊಳಗೆ ಧಗೆ ಹೆಚ್ಚಾದರೆ, ಕಾರು ಬಿಸಿಯಾದರೇ ಕಾರಿನಲ್ಲಿ ಎಸಿ ಹಾಕಿಕೊಳ್ಳುತ್ತೇವೆ, ಕಾರನ್ನು ನೆರಳಿಗೆ ನಿಲ್ಲಿಸುತ್ತೇವೆ, ಆದರೆ ಇಲ್ಲೊಬ್ಬ ಮಹಿಳೆ ತಮ್ಮ ಕಾರನ್ನು ತಂಪಾಗಿಸಲು ವಿಶೇಷ ಪ್ರಯೋಗ ಮಾಡಿದ್ದಾರೆ.
ಅಹಮದಾಬಾದ್​ ನಗರದಲ್ಲಿ ಬಿಸಿಲ ಬೇಗೆ ಹೆಚ್ಚಳವಾಗಿದ್ದು ತಾಪಮಾನವು 45 ಡಿಗ್ರಿವರೆಗೂ ಏರಿಕೆಯಾಗಿದೆ. ಹೀಗಾಗಿ ಇಡೀ ಕಾರಿಗೆ ಸಗಣಿಯನ್ನು ಹಚ್ಚಿ ಕಾರನ್ನು ತಂಪಾಗಿರಿಸುವ ಜತೆಗೆ ಚಾಲನೆ ವೇಳೆ ತಂಪಾದ ಅನುಭವವನ್ನು ಪಡೆಯುವ ಪ್ರಯತ್ನವನ್ನು ಇಲ್ಲಿನ ಮಹಿಳೆಯೊಬ್ಬರು ಮಾಡಿದ್ದಾರೆ.
ಸೆಜಲ್ ಶಾ ಎಂಬ ಮಹಿಳೆ ತಮ್ಮ ಟಯೋಟೋ ಆಲ್ಟೀಸ್ ಕಾರಿನ ಮೇಲ್ಮೈಗೆಸಗಣಿ ಸಾರಿಸಿದ್ದಾರೆ.  ರೂಪೇಶ್​ ಗುರಂಗದಾಸ್​ ಎಂಬುವವರು ಈ ಕಾರಿನ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು “ನಾನು ನೋಡಿದ ಸಗಣಿಯ ಉತ್ತಮ ಬಳಕೆ’ ಎಂದು ಜಾಲತಾಣದಲ್ಲಿ ಬರೆದುಕೊಂಡು ಪೋಸ್ಟ್​ ಮಾಡಿರುವ ಅವರು, ಕಾರನ್ನು ತಂಪಾಗಿಸಲು ಕಂಡುಕೊಂಡಿರುವ ಉತ್ತಮ ಪ್ರಯತ್ನ ಎಂದಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಹಲವರು ಪ್ರತಿಕ್ರಿಯೆ ನೀಡಿದ್ದಾರೆ. ಆಕೆಯ ಚಾಲಾಕಿತನವನ್ನು ಹೊಗಳಿ ಪ್ರಶಂಸೆಯ ಸುರಿಮಳೆಯಮನ್ನೇ ಹರಿಸಿದ್ದಾರೆ.
ಭಾರತದಲ್ಲಿ ಸಗಣಿಯನ್ನು ಮನೆಯ ಗೋಡೆ, ಮಹಡಿಗಳಿಗೆ ಹಚ್ಚುವುದು ಸಾಮಾನ್ಯ. ಸಗಣಿಯ ಬೆರಣಿಯನ್ನು ಉರುವಲಾಗಿ ಹಾಗೂ ಔಷಧವಾಗಿ ಬಳಸಲಾಗುತ್ತಿದೆ. 
SCROLL FOR NEXT