ದೇಶ

ಮಹಾರಾಷ್ಟ್ರ: ಚುನಾವಣೆ ಫ‌ಲಿತಾಂಶ ಬಗ್ಗೆ ವಾಗ್ವಾದ, ಬಿಜೆಪಿ ಕಾರ್ಯಕರ್ತನ ಕೊಲೆಯಲ್ಲಿ ಅಂತ್ಯ

Lingaraj Badiger
ಮುಂಬೈ: ಇತ್ತೀಚಿಗಷ್ಟೇ ಪ್ರಕಟವಾದ ಲೋಕಸಭೆ ಚುನಾವಣೆಯ ಫ‌ಲಿತಾಂಶದ ಕುರಿತ ವಾದ-ವಿವಾದ ಬಿಜೆಪಿ ಕಾರ್ಯಕರ್ತನ ಕೊಲೆಯಲ್ಲಿ ಅಂತ್ಯಗೊಂಡ ಆಘಾತಕಾರಿ ಘಟನೆ ಮಹಾರಾಷ್ಟ್ರದ ಅಕೋಲಾ ಜಿಲ್ಲೆಯಲ್ಲಿ ನಡೆದಿದೆ ಎಂದು ಶನಿವಾರ ಪೊಲೀಸರು ತಿಳಿಸಿದ್ದಾರೆ.
ಪೊಲೀಸರ ಪ್ರಕಾರ, ಮುಂಬೈನಿಂದ ಸುಮಾರು 580 ಕಿ.ಮೀ ದೂರದಲ್ಲಿರುವ ಅಕೋಲಾ ಜಿಲ್ಲೆಯ ಮೊಹಲ್ಲಾ ಗ್ರಾಮದಲ್ಲಿ ಶುಕ್ರವಾರ ಸಂಜೆ ಈ ಘಟನೆ ನಡೆದಿದೆ.
ಬಿಜೆಪಿಯ ಅಲ್ಪ ಸಂಖ್ಯಾತ ಘಟಕದ ಕಾರ್ಯಕರ್ತ ಮತೀನ್‌ ಪಟೇಲ್‌(48) ಅವರು ತನ್ನದೇ ಸಮುದಾಯದ, ಆದರೆ ಎದುರಾಳಿ ರಾಜಕೀಯ ಪಕ್ಷಕ್ಕೆ ಸೇರಿದ ಗುಂಪಿನ ಜತೆಗೆ ಚುನಾವಣಾ ಫ‌ಲಿತಾಂಶದ ಬಗ್ಗೆ ವಾದಿಸುತ್ತಿದ್ದಾಗ ಸಮೂಹದ ಸುಮಾರು 8ರಿಂದ 10 ಮಂದಿ ಆತನನ್ನು ಹೊಡೆದು ಕೊಂದರೆಂದು ಪೊಲೀಸರು ತಿಳಿಸಿದ್ದಾರೆ.
ಮತೀನ್‌ ಪಟೇಲ್‌ ಅವರ 55ರ ಹರೆಯದ ಸಹೋದರನ ಮೇಲೂ ಈ ಗುಂಪು ಹಲ್ಲೆ ನಡೆಸಿದೆ. ಪೊಲೀಸರು ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
SCROLL FOR NEXT