ದೇಶ

ನವದೆಹಲಿ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು ಭೇಟಿಯಾದ ಪ್ರಧಾನಿ ಮೋದಿ

Nagaraja AB

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಇಂದು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿಂದು ಉಪ ರಾಷ್ಟ್ರಪತಿ ವೆಂಕಯ್ಯ ನಾಯ್ಡು ಅವರನ್ನು ಭೇಟಿಯಾದರು.

ಬಿಳಿ ಕುರ್ತಾ ಹಾಗೂ  ಕುತ್ತಿಗೆ ತುಂಬಾ ಹಳದಿ ಬಣ್ಣದ ರುಮಾಲ್ ದರಿಸಿದ್ದ ನರೇಂದ್ರ ಮೋದಿಗೆ ಹೂ ಗುಚ್ಚ ನೀಡುವ ಮೂಲಕ ವೆಂಕಯ್ಯನಾಯ್ಡು ಹಾಗೂ ಅವರ ಪತ್ನಿ ಉಷಾ ಅಭಿನಂದಿಸಿದರು.

ಈ ಭೇಟಿಯ ಪೋಟೋಗಳನ್ನು ಟ್ವೀಟರ್ ನಲ್ಲಿ ಶೇರ್ ಮಾಡಿರುವ ವೆಂಕಯ್ಯನಾಯ್ಡು, ಇಂದು ಬೆಳಗ್ಗೆ ಮೋದಿ ಅವರನ್ನು ಭೇಟಿಯಾಗಿದ್ದೆ.  ಮುಂದಿನ  ಪ್ರಧಾನಮಂತ್ರಿ ಹಾಗೂ ಎನ್ ಡಿಎ ನಾಯಕರಾಗಿ ಆಯ್ಕೆಯಾಗಿದ್ದಕ್ಕೆ ಅವರನ್ನು ಅಭಿನಂದಿಸಿದ್ದೇನೆ.  ಉಪಹಾರದ ವೇಳೆಯಲ್ಲಿ ತ್ವರಿತಗತಿಯ ಆರ್ಥಿಕ ಬೆಳವಣಿಗೆ ಹಾಗೂ ಸಾಂವಿಧಾನಿಕ ಸಂಸ್ಥೆಗಳನ್ನು ಬಲಗೊಳಿಸುವ ಸಂಬಂಧ ಚರ್ಚೆ ನಡೆಸಿದ್ದೇವೆ ಎಂದು ಹೇಳಿದ್ದಾರೆ.
SCROLL FOR NEXT