ದೇಶ

ಚುನಾವಣೆಯಲ್ಲಿ ಕೈ ಪಕ್ಷದ ಸೋಲಿಗೆ ಶಿವಸೇನೆ ಕೊಟ್ಟ ಕಾರಣ ಹೀಗಿದೆ!

Raghavendra Adiga
ಮುಂಬೈ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರ ವ್ಯಕ್ತಿತ್ವವು ಜನರನ್ನು ಆಕರ್ಷಿಸುವಲ್ಲಿ ವಿಫಲವಾಗಿದೆ, ಹೀಗಾಗಿ ಕಾಂಗ್ರೆಸ್ ಗೆ ಈ ಚುನಾವಣೆಯಲ್ಲಿ ಹೀನಾಯ ಸೋಲಾಗಿದೆ ಎಂದು ಶಿವಸೇನೆ ಹೇಳಿದೆ.
"2014ಕ್ಕಿಂತಲೂ ಈ ಬಾರಿ ಕಾಂಗ್ರೆಸ್ ಇನ್ನಷ್ಟು ಅಪಮಾನಕರವಾಗಿ ಸೋಲು ಕಂಡಿದೆ." ಶಿವಸೇನೆ ತನ್ನ  ಮುಖವಾಣಿ 'ಸಾಮ್ನಾ' ದಲ್ಲಿ ಹೇಳಿದೆ.
ರಾಹುಲ್ ಗಾಂಧಿ ಅವರ ವ್ಯಕ್ತಿತ್ವವು ಜನರನ್ನು ಆಕರ್ಷಿಸಿಲ್ಲ, ಅವರ ಭಾಷಣಗಳು ಸಹ ಜನರನ್ನು ಸೆಳೆಯುವಲ್ಲಿ ವಿಫಲವಾಗಿದೆ. ರಾಹುಲ್ ತಮ್ಮ ಚುನಾವಣೆ ಭಾಷಣದಲ್ಲಿ ಯಾವುದೇ ಒಬ್ಬ ವ್ಯಕ್ತಿ ಅಥವಾ ದೇಶ  ಪ್ರೇರೇಪಿತವಾಗುವಂತೆ ಯಾವುದೇ ಮಾತನ್ನಾಡಿದ್ದು ಇದೆಯೆ? ಎಂದು ಶಿವಸೇನೆ ಪ್ರಶ್ನಿಸಿದೆ.
ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಸಾಧನೆಯನ್ನು ವಿಶ್ಲೇಷಿಸಿದ ಶಿವಸೇನೆ "ದೇಶದ ಅತಿ ಹಳೆಯ ಪಕ್ಷವಾಗಿರುವ ಕಾಂಗ್ರೆಸ್ ಈಗ ದೂರದೃಷ್ಟಿಯ ಕೊರತೆ ಎದುರಿಸ್ಲುತ್ತಿದೆ.ಅಲ್ಲದೆ ಕಾಂಗ್ರೆಸ್ ನಲ್ಲಿ ನಾಯಕರಿದ್ದಾರೆ ಆದರೆ ಕಾರ್ಯಕರ್ತರಿಲ್ಲ ಎಂದು ವ್ಯಂಗ್ಯವಾಡಿದೆ.
ಇದೇ ವೇಳೆ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಪ್ರಿಯಾಂಕಾ ಗ್ಂಆಧಿ ನೇಮಕಕ್ಕೆ ಸಹಮತ ಸೂಚಿಸಿದ ಶಿವಸೇನೆ ಉತ್ತರ ಪ್ರದೇಶದ ಉಸ್ತುವಾರಿ ಹೊತ್ತಿದ್ದ ಪ್ರಿಯಾಂಕಾ ಅವರಿಂದ ಕಾಂಗ್ರೆಸ್ ಈ ಬಾರಿ ಕಳೆದ ಸಾಲಿಗಿಂತ ಹೆಚಿನ ಸ್ಥಾನವನ್ನು ಆ ರಾಜ್ಯದಲ್ಲಿ ಗಳಿಸಲು ಶಕ್ಯವಾಗಿದೆ ಎಂದು ವಿಶ್ಲೇಷಿಸಿದೆ.
SCROLL FOR NEXT