ದೇಶ

ದೀದಿಗೆ ಶಾಕ್: ಟಿಎಂಸಿ ಶಾಸಕ ಮನಿರುಲ್ ಇಸ್ಲಾಂ ಬಿಜೆಪಿಗೆ ಸೇರ್ಪಡೆ, ಇನ್ನೂ 6 ಶಾಸಕರು ಸೇರೋ ಸಾಧ್ಯತೆ!

Vishwanath S
ನವದೆಹಲಿ: ಲೋಕಸಭೆ ಚುನಾವಣೆಯಲ್ಲಿ ತೀವ್ರ ಹಿನ್ನಡೆ ಅನುಭವಿಸಿದ್ದ ಪಶ್ಚಿಮ ಬಂಗಾಳದ ಸಿಎಂ ಮಮತಾ ಬ್ಯಾನರ್ಜಿ ಅವರಿಗೆ ಮತ್ತೊಂದು ದೊಡ್ಡ ಶಾಕ್ ಎದುರಾಗಿದ್ದು ತೃಣಮೂಲ ಕಾಂಗ್ರೆಸ್ ನಿಂದ ಬಿಜೆಪಿಗೆ ತೆರಳುವಾಟ ಮುಂದುವರಿದಿದೆ. ಪಕ್ಷದ ಮತ್ತೋರ್ವ ಮುಸ್ಲಿಂ ಶಾಸಕ ಕೇಸರಿ ಪಾಳಯಕ್ಕೆ ಸೇರ್ಪಡೆಯಾಗಿದ್ದಾರೆ. ಇದರ ಬೆನ್ನಲ್ಲೇ ಆರು ಶಾಸಕರು ಬಿಜೆಪಿ ಸೇರುವ ಸಾಧ್ಯತೆ ಇದೆ ಎನ್ನಲಾಗಿದೆ.
ಪಶ್ಚಿಮ ಬಂಗಾಳದ ಭೀರ್ ಭೂಮ್ ಜಿಲ್ಲೆಯ ಲಬ್ ಪುರ್ ಕ್ಷೇತ್ರದ ಶಾಸಕ ಮನಿರುಲ್ ಇಸ್ಲಾಮ್ ಪಕ್ಷಕ್ಕೆ ಸೇರ್ಪಡೆಯಾಗಿರುವುದಾಗಿ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೈಲಾಶ್ ವಿಜಯವರ್ಗೀಯ ಸುದ್ದಿಗೋಷ್ಠಿಗೆ ತಿಳಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರ ಪದಗ್ರಹಣ ಸಮಾರಂಭಕ್ಕೆ ಹಾಜರಾಗುವುದಾಗಿ ತಿಳಿಸಿದ್ದ ಮಮತಾ, ಉಲ್ಟಾ ಹೊಡೆದಿರುವುದರ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತ, “ಕಾರ್ಯಕ್ರಮಕ್ಕೆ ಭಾಗವಹಿಸದಿರಲು ಬೇಕಾರ ಕಾರಣಗಳನ್ನು ಆಕೆ ಹುಡುಕುತ್ತಿರಬೇಕು” ಎಂದು ವ್ಯಂಗ್ಯವಾಡಿದರು.
ತೃಣಮೂಲ ಕಾಂಗ್ರೆಸ್ ನ 100ಕ್ಕೂ ಹೆಚ್ಚು ಶಾಸಕರು ಬಿಜೆಪಿ ಸಂಪರ್ಕದಲ್ಲಿರುವುದಾಗಿ ಪಕ್ಷದ ಹಿರಿಯ ಮುಖಂಡ ಮುಕುಲ್ ರಾಯ್ ತಿಳಿಸಿದ್ದಾರೆ.
ಮಂಗಳವಾರವಷ್ಟೇ, ಮುಕುಲ್ ರಾಯ್ ಪುತ್ರ, ಶಾಸಕ ಸುಭ್ರಂಗ್ಶು ರಾಯ್, ಅವರ ಇಬ್ಬರು ಸಹೋದ್ಯೋಗಿಗಳಾದ ತುಶಾರ್ ಕಾಂತಿ ಭಟ್ಟಾಚಾರ್ಯ ಮತ್ತು ದೇವೇಂದ್ರ ನಾಥ್ ರಾಯ್, ಅಲ್ಲದೆ ಸಿಪಿಐಎಂ ನಿಂದ ದೇವೇಂದ್ರ ನಾಥ್ ರಾಯ್ ಕೇಸರಿ ಪಾಳಯ ಸೇರಿದ್ದರು.
SCROLL FOR NEXT