ದೇಶ

ಸಚಿವ ಸ್ಥಾನ ಹಂಚಿಕೆ ಅಸಮಾಧಾನ: ಮೋದಿ ಸಂಪುಟದಿಂದ ದೂರ ಉಳಿದ ಜೆಡಿ(ಯು)

Vishwanath S
ನವದೆಹಲಿ: ಮಹತ್ತರ ಬೆಳವಣಿಗೆಯಲ್ಲಿ ಎನ್‌ಡಿಎದ ಪ್ರಮುಖ ಮಿತ್ರಪಕ್ಷವಾದ ಜನತಾದಳ (ಸಂಯುಕ್ತ) ದ ನಾಯಕ ನಿತೀಶ್‌ ಕುಮಾರ್‌, ತಮ್ಮ ಪಕ್ಷ ನರೇಂದ್ರ ಮೋದಿ ಸರ್ಕಾರದಲ್ಲಿ ಈ ಬಾರಿ ಸಂಪುಟದ ಭಾಗವಾಗಿರುವುದಿಲ್ಲ ಎಂದು ಗುರುವಾರ ಹೇಳಿದ್ದಾರೆ.

ಮೋದಿ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ತೆರಳುವ ಮೊದಲು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಸಚಿವ ಸ್ಥಾನಗಳ ಹಂಚಿಕೆಗೆ ನಾವು ಸಮ್ಮತಿಸಿಲ್ಲ, ಆದರೆ ನಾವು ಎನ್‌ಡಿಎ ಮೈತ್ರಿಕೂಟದ ಭಾಗವಾಗಿರುತ್ತೇವೆ ಎಂದು ತಿಳಿಸಿದ್ದಾರೆ.

ಬಿಜೆಪಿ ತನ್ನೆಲ್ಲ ಮಿತ್ರಪಕ್ಷಗಳಿಗೂ ಸಂಪುಟದಲ್ಲಿ ಕೇವಲ ಒಂದು ಸ್ಥಾನ ನೀಡಿದೆ ಎನ್ನಲಾಗಿದ್ದು, ಇದರ ಬೆನ್ನಲ್ಲೇ ಬಿಹಾರ ಮುಖ್ಯಮಂತ್ರಿಯವರು ಈ ಹೇಳಿಕೆ ನೀಡಿದ್ದಾರೆ.

ನಿತಿಶ್‌ ಕುಮಾರ್‌, ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಜೊತೆಗಿನ ಸಭೆಯ ವೇಳೆ 2 ಸಂಪುಟ ಸಚಿವ ಸ್ಥಾನ ಕೇಳಿದ್ದರು ಎಂದು ಮೂಲಗಳು ತಿಳಿಸಿವೆ.

40 ಸ್ಥಾನಗಳ ಬಿಹಾರದಲ್ಲಿ ನಿತೀಶ್‌ ಕುಮಾರ್‌ ಪಕ್ಷ 16 ಸ್ಥಾನಗಳನ್ನು ಗೆದ್ದರೆ, ಬಿಜೆಪಿ ತಾನು ಸ್ಪರ್ಧಿಸಿದ್ದ ಎಲ್ಲ 17 ಸ್ಥಾನ ಗೆದ್ದಿತ್ತು.

2013ರಲ್ಲಿ ಮೋದಿ ಅವರನ್ನು ಪ್ರಚಾರ ಸಮಿತಿ ಅಧ್ಯಕ್ಷರನ್ನಾಗಿ ನೇಮಕ ಮಾಡಿದಾಗ ಜೆಡಿಯು ಎನ್‌ಡಿಎದಿಂದ ಹೊರನಡೆದಿತ್ತು. ಆದರೆ  2017ರ ನವೆಂಬರ್‌ನಲ್ಲಿ ಮತ್ತೆ ಮೈತ್ರಿಕೂಟಕ್ಕೆ ಮರಳಿತ್ತು.
SCROLL FOR NEXT