ದೇಶ

ಆರ್ಥಿಕ ಪ್ರಗತಿ ಕುಂಠಿತ, ನಿರುದ್ಯೋಗ ದೇಶದ ಮುಂದಿರುವ ಎರಡು ಪ್ರಮುಖ ಸವಾಲುಗಳು- ಕಾಂಗ್ರೆಸ್

Nagaraja AB

ನವದೆಹಲಿ: ಆರ್ಥಿಕ ಪ್ರಗತಿ ಕುಂಠಿತ ಹಾಗೂ ನಿರುದ್ಯೋಗ ದೇಶದ ಮುಂದಿರುವ ಎರಡು ಪ್ರಮುಖ ಸವಾಲು ಆಗಿದ್ದು , ನೂತನ ಸರ್ಕಾರ ಇವುಗಳ ಬಗ್ಗೆ ಸೊಲ್ಲೆತ್ತುವ ವಿಶ್ವಾಸವಿದೆ ಎಂದು ಕಾಂಗ್ರೆಸ್  ಹೇಳಿದೆ.

ಆರ್ಥಿಕ  ಪ್ರಗತಿ ಕುಂಠಿತ ಹಾಗೂ ನಿರುದ್ಯೋಗ ಸಮಸ್ಯೆಗಳು ದೇಶದ ಮುಂದಿವೆ.  ಪ್ರಧಾನಮಂತ್ರಿ ಹಾಗೂ ಹಣಕಾಸು ಸಚಿವರು ಅಲ್ಪಾವಧಿ- ಮಧ್ಯಮ ಹಾಗೂ ಧೀರ್ಘಾವಧಿಯ ನೀಲಿನಕ್ಷೆ ರೂಪಿಸುವ ಮೂಲಕ  ಆರ್ಥಿಕ ಬೆಳವಣಿಗೆ  ಹಾಗೂ ಉದ್ಯೋಗ ಸೃಷ್ಟಿ ಕಾರ್ಯತಂತ್ರಕ್ಕೆ ಚಾಲನೆ ನೀಡುವ ನೀಡುವ ವಿಶ್ವಾಸವಿದೆ ಎಂದು ಕಾಂಗ್ರೆಸ್  ರಾಷ್ಟ್ರೀಯ ವಕ್ತಾರ ರಣದೀಪ್ ಸಿಂಗ್ ಸುರ್ಜಿವಾಲಾ ಟ್ವೀಟ್ ಮಾಡಿದ್ದಾರೆ.

ಕಳೆದ 9 ತಿಂಗಳ ಅವಧಿಯಲ್ಲಿ ಕೃಷಿ, ಉದ್ಯಮ, ಮತ್ತು ಉತ್ಪಾದನಾ ಕ್ಷೇತ್ರದಲ್ಲಿ ಕುಂಠಿತದಿಂದ  ಜನವರಿಯಿಂದ ಮಾರ್ಚ್ ವರೆಗಿನ ತ್ರೈಮಾಸಿಕ ಅವಧಿಯಲ್ಲಿ ಶೇ, 5.8 ರಷ್ಟು ಇಳಿಕೆಯಾಗಿತ್ತು ಎಂದು ಅವರು ಹೇಳಿದ್ದಾರೆ.

ಹಿಂದಿನ ಹಣಕಾಸು ವರ್ಷದಲ್ಲಿ ಶೇ, 3.4  ರಷ್ಟು ದೇಶ ವಿತ್ತಿಯ ಕೊರತೆ ಅನುಭವಿಸಿತ್ತು.ಇದು ಮಧ್ಯಂತರ ಬಜೆಟ್ ನಲ್ಲಿನ ಅಂದಾಜಿಗೆ ಹತ್ತಿರದಲ್ಲಿ ಇದೆ. ಹಣಕಾಸು ವರ್ಷದಲ್ಲಿನ ಒಟ್ಟಾರೇ ವೆಚ್ಚವು ಪರಿಷ್ಕೃತ ಗುರಿ 24. 1 ಲಕ್ಷ ಕೋಟಿ ಬದಲಿಗೆ 23. 1 ಲಕ್ಷ ಕೋಟಿಗಳಷ್ಟಾಗಿದೆ ಎಂದು ಅವರು ತಿಳಿಸಿದ್ದಾರೆ.

SCROLL FOR NEXT