ದೇಶ

ಭಾರತದ ರಾಷ್ಟ್ರಗೀತೆ ಮೊಳಗುವಾಗ ಜರ್ಮನಿ ಚಾನ್ಸಿಲರ್ ಮರ್ಕೆಲ್ ಕುಳಿತೇ ಇದ್ದದ್ದು ಏಕೆ ಗೊತ್ತಾ?

Srinivasamurthy VN

ನವದೆಹಲಿ: ಎರಡು ದಿನಗಳ ಭಾರತ ಪ್ರವಾಸ ನಿಮಿತ್ತ ದೆಹಲಿಗೆ ಆಗಮಿಸಿರುವ ಜರ್ಮನಿ ಚಾನ್ಸಿಲರ್ ಏಂಜೆಲಾ ಮರ್ಕೆಲ್ ಅವರು ಭಾರತದ ರಾಷ್ಟ್ರಗೀತೆ ಮೊಳಗುವಾಗ ಕುಳಿತೇ ಇದ್ದರು. ಈ ಕುರಿತ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆಯಾದರೂ, ಅವರ ಈ ನಡೆಗೆ ಕಾರಣ ಕೂಡ ತಿಳಿದುಬಂದಿದೆ.

ಹೌದು.. ದೆಹಲಿಯಲ್ಲಿ ರಾಷ್ಟ್ರಪತಿ ಭವನದಲ್ಲಿ ಜರ್ಮನಿ ಚಾನ್ಸಿಲರ್ ಏಂಜೆಲಾ ಮರ್ಕೆಲ್ ಅವರಿಗೆ ಗಾರ್ಡ್ ಆಫ್ ಹಾನರ್ ಗೌರವ ಸಲ್ಲಿಕೆ ಮಾಡಲಾಯಿತು. ಬಳಿಕ ರಾಷ್ಟ್ರಗೀತೆ ಮೊಳಗಿಸಿದ ಬಳಿಕ ಅವರಿಗೆ ಸೈನಿಕರು ಪರೇಡ್ ಗೌರವ ಸಲ್ಲಿಕೆ ಮಾಡಿದರು. ಆದರೆ ರಾಷ್ಟ್ರಗೀತೆ ಮೊಳಗುವಾಗ ಮರ್ಕೆಲ್ ಅವರು ಕುರ್ಚಿಯಲ್ಲಿಯೇ ಕುಳಿತಿದ್ದರು. ಇದು ಬಾರಿ ಚರ್ಚೆಗೆ ಕಾರಣವಾಗಿತ್ತು. ಆದರೆ ಕುರಿತಂತೆ ವಿದೇಶಾಂಗ ಇಲಾಖೆ ಮೂಲಗಳು ಸ್ಪಷ್ಟನೆ ನೀಡಿದ್ದು, ಮಾರ್ಕೆಲ್ ಅವರು ಉದ್ದೇಶಪೂರ್ವಕವಾಗಿ ಈ ರೀತಿ ಮಾಡಿಲ್ಲ ಎಂದು ಹೇಳಿದೆ.

ಜರ್ಮನಿ ಚಾನ್ಸಿಲರ್ ಏಂಜೆಲಾ ಮರ್ಕೆಲ್ ಅವರು ಅನಾರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು, ಹೆಚ್ಚು ಹೊತ್ತು ನಿಲ್ಲಲು ಸಾಧ್ಯವಿಲ್ಲ. ಹೀಗಾಗಿ ರಾಷ್ಟ್ರಗೀತೆ ಮೊಳಗುವ ಸಂದರ್ಭದಲ್ಲಿ ಕುಳಿತುಕೊಳ್ಳಲು ಜರ್ಮನಿ ಅಧಿಕಾರಿಗಳು ಭಾರತ ಸರ್ಕಾರದಿಂದ ಅನುಮತಿ ಕೂಡ ಪಡೆದಿದ್ದರು ಎಂದು ವಿದೇಶಾಂಗ ಇಲಾಖೆ ಮೂಲಗಳು ತಿಳಿಸಿವೆ. 

ಇನ್ನು ಮರ್ಕೆಲ್ 2 ದಿನಗಳ ಕಾಲ ಭಾರತ ಪ್ರವಾಸ ಮಾಡಲಿದ್ದು, ಈ ವೇಳೆ ಕೆಲ ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಲಿದ್ದಾರೆ. 

SCROLL FOR NEXT