ದೇಶ

ಸೌದೆ ಒಲೆಯಲ್ಲಿ ನಾನ್ ವೆಜ್ ಅಡುಗೆ ಮೂಲಕ ಯುಟ್ಯೂಬ್ ಸ್ಟಾರ್ ಆಗಿದ್ದ ಅಜ್ಜನ ನಿಧನ!

Vishwanath S

ಹೈದರಾಬಾದ್: ನಾನ್ ವೆಜ್ ಅಡುಗೆ ಮೂಲಕ ಯುಟ್ಯೂಬ್ ನಲ್ಲಿ ಸಂಚಲನ ಮೂಡಿಸಿದ್ದ ಗ್ರ್ಯಾಂಡ್ ಕಿಚನ್ ಯುಟ್ಯೂಬ್ ಚಾನೆಲ್ ಖ್ಯಾತಿಯ 73 ವರ್ಷದ ನಾರಾಯಣ ರೆಡ್ಡಿ ನಿಧನ ಹೊಂದಿದ್ದಾರೆ. 

ನಾರಾಯಣ ರೆಡ್ಡಿ ಅವರು ಕೆಲ ದಿನಗಳಿಂದ ವಯೋ ಸಹಜ ಸಮಸ್ಯೆಗಳಿಂದ ಬಳಲುತ್ತಿದ್ದು ಅವರ ಆರೋಗ್ಯ ಹದಗೆಟ್ಟಿತ್ತು. ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ. 

ಯುಟ್ಯೂಬ್ ನಲ್ಲಿ ನಾರಾಯಣ ರೆಡ್ಡಿ ಅವರ ಗ್ರ್ಯಾಂಡ್ ಕಿಚನ್ ಚಾನೆಲ್ ಗೆ 60 ಲಕ್ಷಕ್ಕೂ ಹೆಚ್ಚು ಚಂದಾದಾರರಿದ್ದರು. ಬಯಲಿನಲ್ಲಿ ಸೌದೆ ಒಲೆಯಲ್ಲಿ ಸಾಂಪ್ರದಾಯಿಕ ಶೈಲಿಯಲ್ಲಿ ನಾರಾಯಣ ರೆಡ್ಡಿ ಅವರು ಅಡುಗೆ ಮಾಡುತ್ತಿದ್ದರು. 

ತಾವು ತಯಾರಿಸಿದ ಅಡುಗೆಯನ್ನು ಬಡ ಮಕ್ಕಳಿಗೆ ನಾರಾಯಣ ರೆಡ್ಡಿ ಅವರು ಹಂಚುತ್ತಿದ್ದರು.

SCROLL FOR NEXT