ದೇಶ

ಗುಜರಾತ್‌ನ ಬನೇಜ್ ಮತಗಟ್ಟೆಯ ಏಕೈಕ ಮತದಾರ ಬಾಪು ನಿಧನ

Srinivas Rao BV

ಗಾಂಧಿನಗರ: ಗುಜರಾತ್‌ನ ಗಿರ್ ಸೋಮನಾಥ್ ಜಿಲ್ಲೆಯ ಬನೇಜ್ ಮತಗಟ್ಟೆಯ ಏಕೈಕ ಮತದಾರ ಎಂಬ ಕಾರಣಕ್ಕೆ ದೇಶಾದ್ಯಂತ ಸುದ್ದಿಯಾಗಿದ್ದ ಮಹಾಂತ್ ಭರತ್‌ದಾಸ್ ಬಾಪು ನಿಧನರಾಗಿದ್ದಾರೆ. ಬಾಪು  ಅವರು ರಾಜ್‌ಕೋಟ್‌ನ ಖಾಸಗಿ ಆಸ್ಪತ್ರೆಯಲ್ಲಿ ಶುಕ್ರವಾರ ನಿಧನರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಜುನಾಗಢ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಪಶ್ಚಿಮ ಗಿರ್ ಅರಣ್ಯದ ಒಳಗಿರುವ ಶಿವನ  ದೇವಸ್ಥಾನದಲ್ಲಿ ವಾಸವಿದ್ದ ಬಾಪು ಅವರಿಗಾಗಿಯೇ ಬನೇಜ್ ಮತಗಟ್ಟೆಯನ್ನು ಗುಜರಾತ್  ವಿಧಾನಸಭೆ ಹಾಗೂ ಸಾರ್ವತ್ರಿಕ ಚುನಾವಣೆ ವೇಳೆ ನಿರ್ಮಿಸಲಾಗಿತ್ತು. ಈ ಮತಗಟ್ಟೆಯಲ್ಲಿ ಅವರು ಏಕೈಕ ಮತದಾರರಾಗಿದ್ದರು. ಭರತ್ ದಾಸ್ ಬಾಪು ಕೂಡ ಯಾವುದೇ ಕಾರಣಕ್ಕೂ ಮತದಾನದಿಂದ ತಪ್ಪಿಸಿಕೊಳ್ಳದೇ ಮತದಾನ ಮಾಡುತ್ತಿದ್ದರು.

SCROLL FOR NEXT