ದೇಶ

ಸುಜಿತ್ ಸಾವಿನ ಬೆನ್ನಲ್ಲೇ ಹರ್ಯಾಣದಲ್ಲಿ ಮತ್ತೊಂದು ಬೋರ್ ವೆಲ್ ದುರಂತ

Srinivasamurthy VN

ಕರ್ನಾಲ್: ತಮಿಳುನಾಡಿನಲ್ಲಿ ಬಾಲಕ ಸುಜಿತ್ ಕೊಳವೆಬಾವಿಗೆ ಬಿದ್ದು ಸಾವನ್ನಪ್ಪಿದ ದುರಂತ ಹಸಿರಾಗಿರುವಂತೆಯೇ ಇತ್ತ ಹರ್ಯಾಣದಲ್ಲೂ ಮತ್ತೊಂದು ಅಂತಹುದೇ ಘಟನೆ ನಡೆದಿದೆ.

ಹರಿಯಾಣದ ಘರೌಂಡಾದ ಹರಿಸಿಂಗ್ ಪುರ ಗ್ರಾಮದಲ್ಲಿ 5 ವರ್ಷದ ಬಾಲಕಿ ಶಿವಾನಿ ಬೋರ್‌ವೆಲ್‌ಗೆ ಬಿದ್ದಿದ್ದು, ರಕ್ಷಣಾ ಕಾರ್ಯಾಚರಣೆಯಲ್ಲಿ ಎನ್‌ಡಿಆರ್‌ಎಫ್ ತಂಡ ಪಾಲ್ಗೊಂಡಿದೆ. ಭಾನುವಾರ ರಾತ್ರಿ 9 ಗಂಟೆ ಸುಮಾರಿಗೆ ಅಮಾಯಕ ಶಿವಾನಿ 50-60 ಫಿಟ್ ಆಳದ ಬೋರ್‌ವೆಲ್‌ನಲ್ಲಿ ಸಿಕ್ಕಿಬಿದ್ದಿದ್ದಾರೆ. ಬಾಲಕಿ ಮಧ್ಯಾಹ್ನದಿಂದ ಕಾಣೆಯಾಗಿದ್ದಳು. ಬಳಿಕ ಆಕೆಯನ್ನು ಹುಡುಕುವಾಗ ಬಾಲಕಿ ಕೊಳವೆ ಬಾವಿಯಲ್ಲಿ ಬಿದ್ದಿರುವುದು ತಿಳಿದುಬಂದಿದೆ. 

ವಿಚಾರ ತಿಳಿದ ಕೂಡಲೇ ಸ್ಖಳಕ್ಕಾಗಮಿಸಿದ ಪೊಲೀಸರು ಅಗ್ನಿಶಾಮಕ ಮತ್ತು ಎನ್ ಡಿಆರ್ ಎಫ್ ತಂಡಕ್ಕೆ ಮಾಹಿತಿ ನೀಡಿದ್ದಾರೆ. ಕೂಡಲೇ ಸ್ಥಳಕ್ಕಾಗಮಿಸಿದ ಎನ್ ಡಿಆರ್ ಎಫ್ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆ ಆರಂಭಿಸಿದ್ದು, ಮಗುವಿಗೆ ಉಸಿರಾಡಲು ಆಮ್ಲಜನಕವನ್ನು ಒದಗಿಸಲಾಗುತ್ತಿದೆ.

ವಿಫಲವಾದ ಮೊದಲ ರಕ್ಷಣಾ ಪ್ರಯತ್ನ
ಶಿವಾನಿಯನ್ನು ಉಳಿಸಲು ಎನ್‌ಡಿಆರ್‌ಎಫ್ ಮಾಡಿದ ಮೊದಲ ಪ್ರಯತ್ನ ವಿಫಲವಾಗಿದ್ದು, ಪೈಪ್‌ನ ಕೆಳಗೆ ಒಂದು ಹಗ್ಗವನ್ನು ಹಾಕುವ ಮೂಲಕ ಶಿವಾನಿಯನ್ನು ಹೊರತೆಗೆಯಲು ಪ್ರಯತ್ನಿಸಲಾಯಿತು. ಆದರೆ ಈ ಪ್ರಯತ್ನ ಯಶಸ್ವಿಯಾಗಿಲ್ಲ. ಸಿಸಿಟಿವಿಯಲ್ಲಿ ಶಿವಾನಿಯ ಕಾಲು ಗೋಚರಿಸುತ್ತಿದ್ದು, ಈಗ ಎನ್‌ಡಿಆರ್‌ಎಫ್ ತಂಡ ಶಿವಾನಿಯನ್ನು ರಕ್ಷಿಸಲು ಇತರ ಆಯ್ಕೆಗಳನ್ನು ಪರಿಗಣಿಸುತ್ತಿದೆ. ಬಾಲಕಿಯ ತಲೆ ಕೆಳಭಾಗದಲ್ಲಿದೆ, ಇದರಿಂದಾಗಿ ಆಕೆಯನ್ನು ಹೊರತೆಗೆಯಲು ತೊಂದರೆಯಾಗುತ್ತಿದೆ. ಕೊಳವೆಗಳ ಮೂಲಕ ಆಮ್ಲಜನಕವನ್ನು ಸಹ ನೀಡಲಾಗುತ್ತಿದೆಯಾದರೂ, ಬಾಲಕಿ ಶಿವಾನಿಯ ಸ್ಥಿತಿಯ ಬಗ್ಗೆ ಹೆಚ್ಚು ತಿಳಿದಿಲ್ಲ ಎಂದು ಹೇಳಲಾಗಿದೆ.

SCROLL FOR NEXT