ದೇಶ

ವಾಟ್ಸಪ್ ಗೂಢಚರ್ಯೆ: ತನಿಖೆಗೆ 2 ಸಂಸದೀಯ ಸಮಿತಿ!

Srinivasamurthy VN

ನವದೆಹಲಿ: ಇಡೀ ದೇಶವನ್ನೇ ಬೆಚ್ಚಿ ಬೀಳಿಸಿರುವ ವಾಟ್ಸಪ್ ಗೂಢಚರ್ಯೆ ವಿಚಾರಕ್ಕೆ ಸಂಬಂಧಿಸಿದಂತೆ ತನಿಖೆಗೆ 2 ಸಂಸದೀಯ ಸಮಿತಿ ರಚನೆ ಮಾಡಲಾಗಿದೆ.

ಕಾಂಗ್ರೆಸ್ ಮುಖ್ಯಸ್ಥ ಆನಂದ್ ಶರ್ಮಾ ಅವರ ನೇತೃತ್ವದಲ್ಲಿ ಸಂಸದೀಯ ಸ್ಥಾಯಿ ಸಮಿತಿ (ಗೃಹ ವ್ಯವಹಾರ) ರಚನೆಯಾಗಿದ್ದು, ನವೆಂಬರ್ 15ರಂದು ಈ ಸಮಿತಿ ತನ್ನ ಮೊದಲ ಸಭೆ ನಡೆಸಲಿದೆ. ಅಂತೆಯೇ ಕಾಂಗ್ರೆಸ್ ಸಂಸದ ಶಶಿತರೂರ್ ಅವರ ನೇತೃತ್ವದಲ್ಲಿ ಮತ್ತೊಂದು ಸಂಸದೀಯ ಸಂಸದೀಯ ಸ್ಥಾಯಿ ಸಮಿತಿ (ಮಾಹಿತಿ ಮತ್ತು ತಂತ್ರಜ್ಞಾನ) ತಾಂತ್ರಿಕ ವಿಚಾರ ಮತ್ತು ಸೈಬರ್ ಭದ್ರತೆ ಕುರಿತು ಮಾಹಿತಿ ಕಲೆಹಾಕಲಿದ್ದಾರೆ ಎಂದು ತಿಳಿದುಬಂದಿದೆ.

ಈ ವೇಳೆ ಮಾತನಾಡಿದ ಶಶಿ ತರೂರ್, ಯಾವುದೇ ಕಾರಣಕ್ಕೂ ನಾವು ಸರ್ಕಾರದ ಕಳ್ಳಗಣ್ಣಿನ ಅಡಿಯಲ್ಲಿ ಜೀವಿಸಬಾರದು. ಇದನ್ನು ಸಮರ್ಥವಾಗಿ ಎದುರಿಸಬೇಕು. ಇಲ್ಲವಾದಲ್ಲಿ ಭಾರತ ಕೂಡ ಚೀನಾದಂತೆಯೇ ಆಗುತ್ತದೆ ಎಂದು ಕಿಡಿಕಾರಿದ್ದಾರೆ. 

ಇತ್ತೀಚೆಗಷ್ಟೇ ಫೇಸ್ ಬುಕ್ ಒಡೆತನದ ವಾಟ್ಸಪ್ ಸಂಸ್ಥೆ ತಾನೂ ಸರ್ಕಾರದ ಅನುಮತಿ ಮೇರೆಗೆ ದೇಶದ ಖ್ಯಾತ ಪತ್ರಕರ್ತರ, ಮಾನವಹಕ್ಕು ಹೋರಾಟಗಾರರ ವಾಟ್ಸಪ್ ಸಂದೇಶಗಳ ಮೇಲೆ ನಿಗಾ ಇರಿಸಲಾಗಿತ್ತು ಎಂದು ಹೇಳಿತ್ತು. ಇದು ದೇಶದಲ್ಲಿ ಇದೀಗ ವ್ಯಾಪಕ ಚರ್ಚೆಗೆ ಗ್ರಾಸವಾಗಿದೆ.

SCROLL FOR NEXT