ದೇಶ

ಪಿಎಂಸಿ ಬ್ಯಾಂಕ್ ಅವ್ಯವಹಾರಕ್ಕೆ ಮತ್ತೊಂದು ಬಲಿ, ಸಾವಿನ ಸಂಖ್ಯೆ 8ಕ್ಕೆ ಏರಿಕೆ

Srinivasamurthy VN

ಮುಂಬೈ: ಪಂಜಾಬ್ ಮಹಾರಾಷ್ಟ್ಪ ಬ್ಯಾಂಕ್ (ಪಿಎಂಸಿ ಬ್ಯಾಂಕ್)ಅವ್ಯವಹಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಹಣ ಠೇವಣಿ ಇಟ್ಟಿದ್ದ ಮತ್ತೊರ್ವ ಖಾತೆದಾರ ಸಾವನ್ನಪ್ಪಿದ್ದಾನೆ.

ಥಾಣೆಯ ಕಶೇಲಿಯಲ್ಲಿರುವ ಮನೆಯಲ್ಲಿ ಸುಮಾರು 74 ವರ್ಷದ ಖಾತೆ ಆ್ಯಂಡ್ರ್ಯೂ ಲೋಬೋ ಎಂಬುವವರು ಸಾವನ್ನಪ್ಪಿದ್ದು, ಆ ಮೂಲಕ ಪ್ರಕರಣಕ್ಕೆ ಸಂಬಂಧಿಸಿದಂತೆ ಸಾವಿಗೀಡಾದವರ ಸಂಖ್ಯೆ 8ಕ್ಕೆ ಏರಿಕೆಯಾಗಿದೆ. ಲೋಬೋ ಕುಟುಂಬಸ್ಥರು ತಿಳಿಸಿರುವಂತೆ ಅವರು ಪಿಎಂಸಿ ಬ್ಯಾಂಕ್ ನಲ್ಲಿ 26 ಲಕ್ಷ ರೂಗಳನ್ನು ಠೇವಣಿ ಮಾಡಿದ್ದರು. ಠೇವಣಿಯಿಂದ ಬರುತ್ತಿದ್ದ ಬಡ್ಡಿಹಣದಲ್ಲಿ ಅವರು ಜೀವನ ನಿರ್ವಹಣೆ ಮಾಡುತ್ತಿದ್ದರು.

ಆದರೆ ಇತ್ತೀಚೆಗೆ ಅವ್ಯವಾಹರ ಪ್ರಕರಣಗಳನ್ನು ಗಮನಿಸಿದ್ದ ಆರ್ ಬಿಐ ಬ್ಯಾಂಕ್ ಮೇಲೆ ನಿರ್ಬಂಧ ಹೇರಿತ್ತು. ಬಳಿಕ ಸೆಪ್ಟೆಂಬರ್ 23ರಂದು ಬ್ಯಾಂಕ್ ನ ಆಡಳಿತ ವರ್ಗವನ್ನು ವಜಾ ಮಾಡಿತ್ತು. ಆದರೆ ಆರ್ ಬಿಐ ನಿರ್ಬಂಧ ಹೇರಿದ್ದರಿಂದ ಲೋಬೋ ಅವರಿಗೆ ಬರುತ್ತಿದ್ದ ಬಡ್ಡಿ ಹಣ ನಿಂತಿತ್ತು. ಹೀಗಾಗಿ ಅವರು ಜೀವನ ನಿರ್ವಹಣೆ ಕಷ್ಟವಾಗಿ ಸಾವನ್ನಪ್ಪಿದ್ದಾರೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

SCROLL FOR NEXT