ದೇಶ

ಗಗನಕ್ಕೇರುತ್ತಿರುವ ಈರುಳ್ಳಿ ಬೆಲೆ: ಇರಾನ್‌, ಅಫ್ಘಾನಿಸ್ತಾನ, ಈಜಿಪ್ಟ್, ಟರ್ಕಿಯಿಂದ ಆಮದಿಗೆ ನಿರ್ಧಾರ 

Sumana Upadhyaya

ನವದೆಹಲಿ: ಈರುಳ್ಳಿಯ ಬೆಲೆ ಗಗನಕ್ಕೇರಿರುವ ಹಿನ್ನೆಲೆಯಲ್ಲಿ ಮತ್ತು ಪೂರೈಕೆ ಕುಂಠಿತವಾಗಿರುವುದರಿಂದ ಅಫ್ಘಾನಿಸ್ತಾನ, ಈಜಿಪ್ಟ್, ಟರ್ಕಿ ಮತ್ತು ಇರಾನ್‌ನಿಂದ ಈರುಳ್ಳಿ ಆಮದು ಮಾಡಿಕೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಮೂಲಕ ಪೂರೈಕೆ ಹೆಚ್ಚಿಸಿ, ಬೆಲೆ ನಿಯಂತ್ರಿಸಲು ಕೇಂದ್ರ ಸರ್ಕಾರ ಮುಂದಾಗಿದೆ.


"ಅಫ್ಘಾನಿಸ್ತಾನ, ಈಜಿಪ್ಟ್, ಇರಾನ್ ಮತ್ತು ಟರ್ಕಿ ದೇಶಗಳಲ್ಲಿನ ಭಾರತೀಯ ಮಿಷನ್ಸ್‌ಗಳಿಗೆ ಭಾರತಕ್ಕೆ ಈರುಳ್ಳಿ ಸರಬರಾಜು ಮಾಡಲು ಕೋರಲಾಗುವುದು" ಎಂದು ಅಧಿಕೃತ ಮೂಲಗಳು ಇಲ್ಲಿ ತಿಳಿಸಿವೆ. ನಿನ್ನೆ ಅಂತರ ಸಚಿವಾಲಯ ಸಮಿತಿ ಸಭೆ ಸೇರಿ ಮಾರುಕಟ್ಟೆಯಲ್ಲಿ ಈರುಳ್ಳಿ ಬೆಲೆ ಮತ್ತು ಪೂರೈಕೆ ಬಗ್ಗೆ ಪರಮಾರ್ಶೆ ನಡೆಸಿದವು.


80 ಕಂಟೇನರ್‌ಗಳಷ್ಟು ಈರುಳ್ಳಿ ತಕ್ಷಣ ಆಮದು ಮಾಡಿಕೊಳ್ಳಲು ಮತ್ತು 100 ಕಂಟೇನರ್‌ಗಳಷ್ಟು ಈರುಳ್ಳಿ ಸಮುದ್ರದ ಮೂಲಕ ಭಾರತಕ್ಕೆ ಕಳುಹಿಸಲು ಇದರಿಂದ ಅನುಕೂಲವಾಗಲಿದೆ" ಎಂದು ಮೂಲಗಳು ತಿಳಿಸಿವೆ.

SCROLL FOR NEXT