ದೇಶ

ಮೈತ್ರಿ ಮುರಿಯಲ್ಲ, ಆದ್ರೆ ಬಿಜೆಪಿ ಕೊಟ್ಟ ಮಾತು ಉಳಿಸಿಕೊಳ್ಳಬೇಕು: ಉದ್ಧವ್ ಠಾಕ್ರೆ

Lingaraj Badiger

ಮುಂಬೈ: ಮಹಾರಾಷ್ಟ್ರದಲ್ಲಿ ಶಿವಸೇನಾ-ಬಿಜೆಪಿ ನಡುವಿನ ಅಧಿಕಾರ ಹಂಚಿಕೆ ಬಿಕ್ಕಟ್ಟು ಮುಂದುವರಿದಿದ್ದು, ನಾನು ಮೈತ್ರಿ ಮುರಿದುಕೊಳ್ಳಲು ಬಯಸುವುದಿಲ್ಲ. ಆದರೆ ಬಿಜೆಪಿ ತಾನು ಕೊಟ್ಟ ಮಾತು ಉಳಿಸಿಕೊಳ್ಳಬೇಕು ಎಂದು ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಅವರು ಗುರುವಾರ ಹೇಳಿದ್ದಾರೆ.

ಇಂದು ಬಾಂದ್ರಾದ ತಮ್ಮ ನಿವಾಸ ಮಾತೋಶ್ರೀಯಲ್ಲಿ ಪಕ್ಷದ ಶಾಸಕರ ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಉದ್ಧವ್ ಠಾಕ್ರೆ ಅವರು, ನಾನು ಮೈತ್ರಿ ಮುರಿದುಕೊಳ್ಳಲು ಬಯಸುವುದಿಲ್ಲ. ಆದರೆ ಈ ಹಿಂದೆ ನಿರ್ಧಾರ ತೆಗೆದುಕೊಂಡಂತೆ ಬಿಜೆಪಿ ನಡೆದುಕೊಳ್ಳಲಿ ಎಂದು ಹೇಳಿದ್ದಾರೆ. ಆದರೆ ಈ ಹಿಂದೆ ಲೋಕಸಭೆ ಚುನಾವಣೆಗೂ ಮುನ್ನ ಎರಡು ಪಕ್ಷಗಳ ನಡುವೆ ಏನು ನಿರ್ಧಾರ ತೆಗೆದುಕೊಳ್ಳಲಾಗಿತ್ತು ಎಂಬುದನ್ನು ಮಾತ್ರ ಅವರು ಬಹಿರಂಗಪಡಿಸಲಿಲ್ಲ.

ಇಂದು ಬೆಳಗ್ಗೆ 11.30ಕ್ಕೆ ಆರಂಭವಾದ ಶಿವಸೇನಾ ಶಾಸಕರ ಸಭೆ ಸುಮಾರು 90 ನಿಮಿಷಗಳ ಕಾಲ ನಡೆಯಿತು. ಸಭೆಯ ಬಳಿಕ ಎಲ್ಲಾ ಶಾಸಕರನ್ನು ಖಾಸಗಿ ಹೋಟೆಲ್ ಗೆ ಶಿಫ್ಟ್ ಮಾಡಲಾಗಿದ್ದು, ಶಾಸಕರ ಮೊಬೈಲ್ ಗಳನ್ನು ಪಡೆದುಕೊಂಡು ಒಂದು ರೂಮ್ ನಲ್ಲಿಡಲಾಗಿದೆ.

ಬಿಜೆಪಿ ನಮ್ಮ ಶಾಸಕರ ಕುದುರೆ ವ್ಯಾಪಾರಕ್ಕೆ ಕೈಹಾಕಬಹುದು ಎಂಬ ಭಯದಿಂದ ನಾವು ಶಾಸಕರನ್ನು ಹೋಟೆಲ್ ಗೆ ಶಿಫ್ಟ್ ಮಾಡುತ್ತಿದ್ದೇವೆ ಎಂದು ಶಿವಸೇನಾ ಮುಖ್ಯ ಸಚೇತಕ ಸುನಿಲ್ ಪ್ರಭು ಅವರು ಹೇಳಿದ್ದಾರೆ.

SCROLL FOR NEXT