ದೇಶ

ಶತಮಾನದ ವಿವಾದಕ್ಕೆ ನಾಳೆ ತೆರೆ: ಅಯೋಧ್ಯೆ ರಾಮಜನ್ಮಭೂಮಿ ಪ್ರಕರಣದ 'ಸುಪ್ರೀಂ' ತೀರ್ಪು ಪ್ರಕಟ!

Vishwanath S

ನವದೆಹಲಿ: ಶತಮಾನದ ಹಳೆಯ ವಿವಾದ ಅಯೋಧ್ಯೆ ರಾಮಜನ್ಮಭೂಮಿ ಮತ್ತು ಬಾಬರಿ ಮಸೀದಿ ಪ್ರಕರಣ ಸಂಬಂಧ ತೀರ್ಪು ನಾಳೆ ಸುಪ್ರೀಂ ಕೋರ್ಟ್ ಪ್ರಕಟಿಸಲಿದೆ. 

ಸುಪ್ರೀಂ ಕೋರ್ಟ್ ಸಿಜೆಐ ರಂಜನ್ ಗೊಗಾಯ್ ನೇತೃತ್ವದ ಪಂಚ ಪೀಠ ನಾಳೆ 10.30ಕ್ಕೆ ಅಯೋಧ್ಯೆ ಪ್ರಕರಣ ಐತಿಹಾಸಿಕ ತೀರ್ಪನ್ನು ಪ್ರಕಟಿಸಲಿದೆ. 

ಈ ಹಿನ್ನೆಲೆಯಲ್ಲಿ ಉತ್ತರ ಪ್ರದೇಶ ಮತ್ತು ನವದೆಹಲಿಯಲ್ಲಿ ಬಿಗಿ ಪೊಲೀಸ್ ಭದ್ರತೆಯನ್ನು ಒದಗಿಸಲಾಗಿದೆ. 

ಬಾಬರಿ ಮಸೀದಿ ಮತ್ತು ಅಯೋಧ್ಯೆ ರಾಮಜನ್ಮ ಭೂಮಿ ವಿವಾದ ಪ್ರಕರಣದ ವಿಚಾರಣೆಯನ್ನು ಸುಪ್ರೀಂ ಕೋರ್ಟ್ ಸುಮಾರು 40 ದಿನಗಳ ಕಾಲ ನಡೆಸಿತ್ತು. 2010ರ ಅಲಹಬಾದ್ ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯ ವಿಚಾರಣೆ ನಡೆಸಿತ್ತು. 

ಅಯೋಧ್ಯೆಯಲ್ಲಿ 2.77 ಎಕರೆ ವಿವಾದಿತ ಭೂಮಿಯನ್ನು ಸುನ್ನಿ ವಕ್ಫ್ ಮಂಡಳಿ, ನಿರ್ಮೋಹಿ ಅಖಾರಾ ಹಾಗೂ ರಾಮ್ ಲಲ್ಲಾ ನಡುವೆ ಸಮಾನವಾಗಿ ಹಂಚಿಕೆ ಮಾಡಲು ಅಲಹಬಾದ್ ಹೈಕೋರ್ಟ್ ಆದೇಶಿಸಿತ್ತು. 

SCROLL FOR NEXT