ದೇಶ

ಸುಪ್ರೀಂಕೋರ್ಟ್ ಐತಿಹಾಸಿಕ ತೀರ್ಪು: ಕೋಮು ಸೌಹಾರ್ದತೆ ಪ್ರದರ್ಶಿಸಿದ ಅಯೋಧ್ಯೆ

Manjula VN

ಅಯೋಧ್ಯೆ: ಸುಪ್ರೀಂಕೋರ್ಟ್ ರಾಮಮಂದಿರ-ಬಾಬ್ರಿ ಮಸೀದಿ ವಿವಾದದ ತೀರ್ಪು ಪ್ರಕಟಿಸುತ್ತಿದ್ದಂತೆಯೇ ಅಯೋಧ್ಯೆಯಲ್ಲಿ ಶನಿವಾರ ನಿರಾಳ ವಾತಾವಣ ಸೃಷ್ಟಿಯಾಗಿದ್ದು, ಭಾವನಾತ್ಮಕ ಪ್ರತಿಕ್ರಿಯೆಗಳು ಹರಿದುಬಂದವು. ನಗರದ ಹಿಂದೂ ಮತ್ತು ಮುಸ್ಲಿಮರು ತೀರ್ಪನ್ನು ಸ್ವಾಗತಿಸಿ, ಕೋಮು ಸೌಹಾರ್ದತೆ ಪ್ರದರ್ಶಿಸಿದರು. 

ತೀರ್ಪು ಸಂತೋಷವನ್ನು ತಂದಿದೆ ಎಂದು ಹಿಂದೂಗಳು ಹರ್ಷವ್ಯಕ್ತಪಡಿಸಿದ್ದಾರೆ. ನಗರದ ಹಲವು ಪ್ರದೇಶಗಳಲ್ಲಿ ಪೊಲೀಸ್ ಸರ್ಪಗಾವಲು ನಿಯೋಜಿಸಿ, ಬ್ಯಾರಿಕೇಡ್'ಗಳನ್ನು ಅಳವಡಿಸಿಸಲಾಗಿತ್ತು. ಹೀಗಾಗಿ ಅನೇಕ ಭಾಗಗಳು ನಿರ್ಜನವಾಗಿದ್ದವು. ಉಳಿದ ಕೆಲವು ಭಾಗಗಳಲ್ಲಿ ಚಟುವಟಿಕೆ ಎಂದಿನಂತಿತ್ತು. ಜನರು ಮನೆಯಿಂದ ಹೊರಬರದೇ ಟಿವಿ ಮುಂದೆ ಕುಳಿತು ತೀರ್ಪವನ್ನು ಅವಲೋಕಿಸುತ್ತಿದ್ದುದ್ದು ಸಾಮಾನ್ಯ ದೃಶ್ಯವಾಗಿತ್ತು.  

ಮಹಂತ್ ನೃತ್ಯ ಗೋಪಾಲ್ ದಾಲ್, ರಾಮಜನ್ಮಭೂಮಿ ನ್ಯಾಸ್ ಮುಖ್ಯಸ್ಥ ಮಹಂತ್ ಸತ್ಯೇಂದ್ರ ದಾಸ್, ದೇಗುಲ ಮುಖ್ಯ ಅರ್ಚಕ ಮಹಂತ್ ಪ್ರಮಹಾನ್ಸ್ ದಾಸ್, ಮಹಂತ್ ರಾಜು ದಾಸ್, ಬಿರ್ಜ್ ಮೋಹನ್ ದಾಸ್ ಎಲ್ಲರೂ ಅಯೋಧ್ಯಎ ತೀರ್ಪವನ್ನು ಹರ್ಷದಿಂದ ಸ್ವಾಗತಿಸಿದ್ದಾರೆ. 

ಬರೇಲಿಯಲ್ಲಿ ಸುನ್ನಿಯ ಎಲಾ ಹಜ್ರತ್ ದರ್ಗಾದ ವಕ್ತಾರ ಮೌಲಾನಾ ಶಹಬುದ್ದೀನ್ ಮಾತನಾಡಿ, ಸುಪ್ರೀಂಕೋರ್ಟ್ ತೀರ್ಪನ್ನು ಸ್ವಾಗತಿಸಿದ್ದಾರೆ. ಆದರೆ, ಹಜಿ ಮೆಹ್ಬೂಬ್ ಎಂಬುವವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. 

 ಭಾರತದಲ್ಲಿ ಇದೊಂದು ಐತಿಹಾಸಿಕ ದಿನ. ಮತ್ತೊಮ್ಮೆ ದೀಪಾವಳಿ ಹಬ್ಬವನ್ನು ಆಚರಿಸೋಣ ಎಂದು ಹೇಳಿದ ಮಹತಂ ನೃತ್ಯ ಗೋಪಾಲ್ ದಾಸ್ ಹೇಳಿದ್ದು, ನ್ಯಾಯಾಲಯದ ಆದೇಶವನ್ನು ಪ್ರಶ್ನಿಸುತ್ತಿರುವವರನ್ನು ಖಂಡಿಸಿದ್ದಾರೆ. ಇಂತಹ ಪ್ರಶ್ನೆಗಳು ಪ್ರಚಾರದ ತಂತ್ರವಷ್ಟೇ ಎಂದಿದ್ದಾರೆ. 

ಇದೊಂದು ಸಮತೋಲಿತ ತೀರ್ಪು. ತೀರ್ಪನ್ನು ಪ್ರತೀಯೊಬ್ಬರು ಒಪ್ಪಬೇಕು ಹಾಗೂ ತಲೆಬಾಗಬೇಕು ಎಂದು ಮಹಂತ್ ಸಂತ್ಯೇಂದ್ರ ದಾಸ್ ಹೇಳಿದ್ದಾರೆ. 

ವಿಹೆಚ್'ಪಿ ಸ್ಥಳೀಯ ವಕ್ತಾರ ಶರದ್ ಶರ್ಮಾ ಮಾತನಾಡಿ, ನಿನ್ನೆವರೆಗೂ ಕನಸಾಗಿಯೇ ಉಳಿದಿದ್ದ ರಾಮ ಮಂದಿರ ನಿರ್ಮಾಣ ಇಂದು ನನಸಾಗುತ್ತಿದೆ. ಹಿಂದೂ ಮತ್ತು ಮುಸ್ಲಿಮರೆಲ್ಲರೂ ಇದು ಜಯವಿದ್ದಂತೆ ಎಂದು ಹೇಳಿದ್ದಾರೆ. 

ಈಗಾಗಲೇ ಮಂದಿರ ನಿರ್ಮಾಣಕ್ಕೆ ಕೆತ್ತನೆಯ ಕಾರ್ಯ ಶೇ,65ರಷ್ಟು ಪೂರ್ಣಗೊಂಡಿದೆ. ಶೀಘ್ರದಲ್ಲಿಯೇ ನಿರ್ಮಾಣ ಕಾರ್ಯದ ಯೋಜನೆ ರೂಪಿಸಲಾಗುತ್ತದೆ ಎಂದು ತಿಳಿಸಿದ್ದಾರೆ. 

SCROLL FOR NEXT