ದೇಶ

ಅಯೋಧ್ಯೆ ತೀರ್ಪಿನ ಬಗ್ಗೆ ವಿವಾದಾತ್ಮಕ ಲೇಖನ: ಕ್ಷಮೆ ಕೋರಿದ ನ್ಯಾಷನಲ್ ಹೆರಾಲ್ಡ್ 

Srinivas Rao BV

ಅಯೋಧ್ಯೆ ತೀರ್ಪಿನ ಬಗ್ಗೆ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯಲ್ಲಿ ಪ್ರಕಟವಾಗಿದ್ದ ವಿವಾದಾತ್ಮಕ ಸಂಪಾದಕೀಯ ಪುಟದ ಲೇಖನದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದ್ದಂತೆಯೇ ಪತ್ರಿಕೆ ಕ್ಷಮೆ ಕೋರಿದೆ.

ತನಗೂ ಲೇಖನಕ್ಕೂ ಸಂಬಂಧವಿಲ್ಲ, ಪ್ರಕಟಿತ ಲೇಖನದ ದೃಷ್ಟಿಕೋನಗಳಿಗೆ ಲೇಖಕರೇ ಜವಾಬ್ದಾರರಾಗಿರುತ್ತಾರೆಯೇ ಹೊರತು, ಆ ಲೇಖನ ನ್ಯಾಷನಲ್ ಹೆರಾಲ್ಡ್ ಪತ್ರಿಕೆಯ ದೃಷ್ಟಿಕೋನವಾಗಿರುವುದುಲ್ಲ ಎಂದು ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಹೇಳಿದೆ.

1992 ರ ಅಯೋಧ್ಯೆ ಘಟನೆ ಹಾಗೂ 2019 ರ ಕೋರ್ಟ್ ತೀರ್ಪಿನ ಚಿತ್ರಗಳನ್ನು ಒಟ್ಟಿಗೆ ಇಟ್ಟು, ಬಲಪ್ರಯೋಗ ಹಾಗೂ ರಕ್ತಪಾತದಿಂದ ಕಟ್ಟಿದ ದೇವಸ್ಥಾನದಲ್ಲಿ ದೇವರು ನೆಲೆಸುತ್ತಾನಾ? ಒಂದು ವೇಳೆ ದೇವರು ನೆಲೆಸಿದರೂ  ಅಂಥಹ ದೇವಾಲಯದಲ್ಲಿ ನಾವು ಪ್ರಾರ್ಥನೆ ಸಲ್ಲಿಸಬಹುದಾ? ಎಂಬ ಶೀರ್ಷಿಕೆ ನೀಡಲಾಗಿತ್ತು. ನ್ಯಾಷನಲ್ ಹೆರಾಲ್ಡ್ ನ ಈ ಯಡವಟ್ಟು ವಿವಾದಕ್ಕೆ ಗುರಿಯಾಗಿ ಬಿಜೆಪಿ, ಕಾಂಗ್ರೆಸ್ ನ ಮುಖವಾಣಿಯಾಗಿರುವ ನ್ಯಾಷನಲ್ ಹೆರಾಲ್ಡ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿತ್ತು. ಅಷ್ಟೇ ಅಲ್ಲದೇ ಎಐಸಿಸಿ ಸೋನಿಯಾ ಗಾಂಧಿ ನ್ಯಾಷನಲ್ ಹೆರಾಲ್ಡ್ ಮಾಡಿರುವ ಪ್ರಮಾದಕ್ಕೆ ಕ್ಷಮೆ ಕೋರಬೇಕೆಂದು ಆಗ್ರಹಿಸಿತ್ತು.

ಈ ವಿವಾದಾತ್ಮಕ ಲೇಖನದ ಮೂಲಕ ನ್ಯಾಷನಲ್ ಹೆರಾಲ್ಡ್ ಸುಪ್ರೀಂ ಕೋರ್ಟ್ ತೀರ್ಪನ್ನು ಅವಮಾನಿಸಿ ದೇಶಕ್ಕೆ ಮುಜುಗರ ಉಂಟುಮಾಡಿದೆ ಎಂದು ಬಿಜೆಪಿ ಆರೋಪಿಸಿತ್ತು.

SCROLL FOR NEXT