ದೇಶ

ಶಿವಸೇನೆಗೆ ಬೆಂಬಲ ನೀಡಲು ಎನ್ ಸಿಪಿ ಹಾಕಿದ್ದು ಒಂದೇ ಒಂದು ಷರತ್ತು, ಅದು ಇಷ್ಟೆ.... 

Srinivas Rao BV

ಮುಂಬೈ: ಮಹಾರಾಷ್ಟ್ರದಲ್ಲಿ ಬಿಜೆಪಿಯೇತರ ಸರ್ಕಾರ ರಚನೆಗೆ ಭೂಮಿಕೆ ಸಿದ್ಧವಾಗುತ್ತಿದೆ. ತನ್ನ ಪಕ್ಷದವರೇ ಮುಖ್ಯಮಂತ್ರಿ ಗಾದಿ ಏರಬೇಕೆಂಬ ಪಟ್ಟನ್ನು ಶಿವಸೇನೆ ಮುಂದುವರೆಸಿದ್ದು, ಎನ್ ಸಿಪಿ ಜೊತೆ ಮೈತ್ರಿ ಕಾಂಗ್ರೆಸ್ ನ ಬಾಹ್ಯ ಬೆಂಬಲದೊಂದಿಗೆ ಅಧಿಕಾರದ ಗದ್ದುಗೆ ಏರಲು ತಯಾರಿ ನಡೆಸಿದೆ. 

ಇತ್ತ ಸರ್ಕಾರ ರಚನೆಗೆ ಶಿವಸೇನೆಯನ್ನು ಬೆಂಬಲಿಸಲು ಸಿದ್ಧ ಎಂದು ಎನ್ ಸುಪಿ ಹೇಳಿದೆಯಾದರೂ ಅದಕ್ಕೆ ಷರತ್ತನ್ನು ವಿಧಿಸಿದೆ. ಅದೇನೆಂದರೆ ಶಿವಸೇನೆ ಕೇಂದ್ರದಲ್ಲಿ ಎನ್ ಡಿಎ ಮೈತ್ರಿಕೂಟದಿಂದ ಹೊರಬಂದರೆ ಮಾತ್ರ ಎನ್ ಸಿಪಿ ಬೆಂಬಲ ದೊರೆಯಲಿದೆ ಎಂದು ನವಾಬ್ ಮಲಿಕ್ ಹೇಳಿದ್ದಾರೆ. 

ಶಿವಸೇನೆಗೆ ಎನ್ ಸಿಪಿ ಬೆಂಬಲ ಬೇಕೆನ್ನುವುದಾದರೆ ಕೇಂದ್ರದಲ್ಲಿ ಎನ್ ಡಿಎ ಮೈತ್ರಿಕೂಟವನ್ನು ತೊರೆಯಬೇಕು, ಕೇಂದ್ರ ಸಚಿವ ಸಂಪುಟದಲ್ಲಿರುವ ಅವರ ಸಚಿವ ಅರವಿಂದ್ ಸಾವಂತ್ ರಾಜೀನಾಮೆ ನೀಡಬೇಕೆಂದು ನವಾಬ್ ಮಲೀಕ್ ಷರತ್ತು ವಿಧಿಸಿದ್ದಾರೆ. 

ಸ್ವತಂತ್ರವಾಗಿ ಸರ್ಕಾರ ರಚಿಸುವಷ್ಟು ಶಾಸಕರ ಸಂಖ್ಯಾಬಲ ಇಲ್ಲದ ಕಾರಣ  ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ರಚನೆಯ ಪ್ರಕ್ರಿಯೆಯಿಂದ ದೂರ ಉಳಿಯುವುದಾಗಿ ಹೇಳುತ್ತಿದ್ದಂತೆಯೇ, ರಾಜ್ಯಪಾಲರು ಎರಡನೇ ಅತಿ ದೊಡ್ಡ ಪಕ್ಷವಾಗಿರುವ ಶಿವಸೇನೆಗೆ ಸರ್ಕಾರ ರಚಿಸುವಂತೆ ಆಹ್ವಾನ ನೀಡಿದ್ದರು. ಈ ಬೆನ್ನಲ್ಲೇ ಶಿವಸೇನೆಗೆ ಎನ್ ಸಿಪಿ ಷರತ್ತು ವಿಧಿಸಿದೆ.
 

SCROLL FOR NEXT